
ದಾಸನ ಜಾಲಿಡೇಸ್ ಖತಂ..ಬೇಲ್ ರದ್ದು ಮಾಡುತ್ತಾ ಸುಪ್ರೀಂ? ದರ್ಶನ್ಗೆ ಮತ್ತೆ ಟೆನ್ಶನ್ ಶುರು!
ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ದರ್ಶನ್ಗೆ ಮಂಜೂರಾಗಿದ್ದ ಬೇಲ್ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಹೈಕೋರ್ಟ್ ನೀಡಿದ್ದ ಜಾಮೀನು ರದ್ದಾಗುವ ಸಾಧ್ಯತೆ ಇದ್ದು, ದರ್ಶನ್ ಭವಿಷ್ಯ ಈಗ ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ಅವಲಂಬಿತವಾಗಿದೆ.
ಪ್ರಾಸಿಕ್ಯೂಶನ್ ಪರವಾಗಿ ಸುಪ್ರಿಂ ಕೋರ್ಟ್ನಲ್ಲಿ ಹಿರಿಯ ವಕೀಲ ಸಿದ್ದಾರ್ಥ್ ಲೂಥ್ರಾ ಅವರನ್ನ ನೇಮಕ ಮಾಡಲಾಗಿದೆ. ಸದ್ಯ ಸುಪ್ರೀಂ ಮುಂದೆ ಈ ಅರ್ಜಿ ಹೋಗಿದ್ದು ಸದ್ಯದಲ್ಲೇ ವಿಚಾರಣೆಗೆ ದಿನಾಂಕ ನಿಗದಿ ಆಗಲಿದೆ. ದರ್ಶನ್ ರೆಗ್ಯೂಲರ್ ಬೇಲ್ ಮೇಲೆ ಆಚೆ ಬಂದ ಮೇಲೆ ಫುಲ್ ರಿಲ್ಯಾಕ್ಸ್ ಆಗಿರೋದು ಸುಳ್ಳಲ್ಲ. ಫಾರ್ಮ್ ಹೌಸ್ನಲ್ಲಿ ವಿಶ್ರಾಂತಿ ಪಡೀತಾ ಡೆವಿಲ್ ಮೂವಿಯ ಡಬ್ಬಿಂಗ್ಗೂ ಹಾಜರಾಗಿರೋ ದಾಸ ಈ ನಡುವೆ ಸಂಕ್ರಾಂತಿ ವೇಳೆ ಸರ್ಜರಿ ಮಾಡಿಸಿಕೊಳ್ಳೋದಕ್ಕೂ ಪ್ಲ್ಯಾನ್ ಮಾಡಿದ್ದಾನೆ. ಆದ್ರೆ ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇಲೆ ದರ್ಶನ್ ಭವಿಷ್ಯ ನಿಂತುಕೊಂಡಿದೆ.