Asianet Suvarna News Asianet Suvarna News

BPO ಹೆಸರಿನಲ್ಲಿ 50 ಲಕ್ಷ ಟೋಪಿ ಹಾಕಿದ ಶಿವಮೊಗ್ಗದ ಕಿಲಾಡಿ ಲೇಡಿ!

BPO ಶುರು ಮಾಡಿ ಕೋಟಿಗಟ್ಟಲೆ ರೂಪಾಯಿ ಲಾಭದ ಆಸೆ ತೋರಿಸಿ ಹಲವರಿಗೆ ಟೋಪಿ! ಶಿವಮೊಗ್ಗದ ಕಿಲಾಡಿ ಲೇಡಿಯ ಖತರ್ನಾಕ್  ಬಿಸ್‌ನೆಸ್! ಮೋಸ ಹೋದವರಿಂದ ಪೊಲೀಸರಿಗೆ ದೂರು  

ಶಿವಮೊಗ್ಗ (ಜೂ. 14): ಭದ್ರಾವತಿ ಮೂಲದ ಮಹಿಳೆಯೊಬ್ಬರು ಶಿವಮೊಗ್ಗ ಜಿಲ್ಲೆಯ ಇಪ್ಪತ್ತಕ್ಕೂ ಹೆಚ್ಚು ಮಂದಿಗೆ BPO ಕಂಪನಿ ಮಾಡಿಸುತ್ತೇನೆ ಎಂದು ಮೋಸಮಾಡಿದ್ದು, ಸದ್ಯ ಅಮಾಯಕ ಕುಟುಂಬವೊಂದನ್ನು ನಂಬಿಸಿ 50 ಲಕ್ಷ ಟೋಪಿ ಹಾಕಿ ಪರಾರಿಯಾಗಿದ್ದಾಳೆ. 

ಭದ್ರಾವತಿಯ ಭೂತನಗುಡಿ ನಿವಾಸಿ ಸ್ವಾತಿ ಷಣ್ಮುಗಂ ಎಂಬ ಖತರ್ನಾಕ್​​​​ ಕಿಲಾಡಿ ಮಹಿಳೆ, ಸ್ಥಳೀಯರಾದ ಸಂಧ್ಯಾ ಹಾಗೂ ಅವರ ಕುಟುಂಬದವರನ್ನು ನಂಬಿಸಿ ನಿಮಗೆ ಸಿಂಗಾಪುರದ BPO ಕಂಪನಿಯನ್ನು ಮಾಡಿ ಕೊಡುತ್ತೇನೆ, ವರ್ಷಕ್ಕೆ ಕೋಟಿಗಟ್ಟಲೆ ರೂಪಾಯಿ ಲಾಭ ಬರುತ್ತದೆ ಎಂದು 50 ಲಕ್ಷ ಹಣವನ್ನು ಪಡೆದು BPO ಕಂಪನಿಯನ್ನು ಶುರು ಮಾಡಿಸಿದ್ದಾಳೆ. 

ಬಳಿಕ ಕಂಪನಿಯ ಆಫೀಸ್​​ ಮತ್ತು ಅದರ ಮೆಟೀರಿಯಲ್​ಗಾಗಿ ಮತ್ತೊಮ್ಮೆ 30 ಲಕ್ಷವನ್ನು ಸಂಧ್ಯಾ ವೆಚ್ಚ ಮಾಡಿದ್ದಾರೆ. ಬಳಿಕ ಹಣ ಹೂಡಿಕೆ ಮಾಡಿಸಿಕೊಂಡ ಖತರ್ನಾಕ್​ ಮಹಿಳೆ ಕೈಗೆ ಸಿಗದೆ ಓಡಾಡುತ್ತಿದ್ದಾಳೆ. ಇದರಿಂದ ಸ್ವಾತಿ ಅಸಲಿ ರೂಪ ಬಯಲಾಗಿದ್ದು, ಸಂಧ್ಯಾ ಕುಟುಂಬ ಬೀದಿಗಿಳಿದಿದ್ದಾರೆ. ಇದೀಗ ಶಿವಮೊಗ್ಗದ ದೊಡ್ಡಪೇಟೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಂಚಕ ಮಹಿಳೆಯ ಬೇಟೆಯಲ್ಲಿದ್ದಾರೆ.

Video Top Stories