Asianet Suvarna News Asianet Suvarna News

ಮಗಳಿಗೆ ಸ್ಕೂಟಿ ಓಡಿಸಲು ಕಲಿಸುತ್ತಿದ್ದ ತಾಯಿ, ಮುಂದೆ ನಡೆದದ್ದು ಘನಘೋರ ಅಪಘಾತ

  • ಸ್ಕೂಟಿ ಚಾಲನಾ ತರಬೇತಿ ವೇಳೆ ಅನಾಹುತ
  • ಉತ್ತರಪ್ರದೇಶದ ಝಾನ್ಸಿಯಲ್ಲಿ ಘಟನೆ
  • ಮಗಳಿಗೆ ಸ್ಕೂಟಿ ಓಡಿಸಲು ಕಲಿಸುತ್ತಿದ್ದ ತಾಯಿ

ದಿನ ಬೆಳಗಾದರೆ ಅಲ್ಲಿ ಅಪಘಾತವಾಯಿತು. ಇಲ್ಲಿ ಅಪಘಾತ ಆಯಿತು ಎಂಬ ಸುದ್ದಿಗಳನ್ನು ಅಪಘಾತದ ಘನಘೋರ ದೃಶ್ಯಗಳನ್ನು ನಾವು ಟಿವಿಯಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಸದಾ ನೋಡುತ್ತಲೇ ಇರುತ್ತೇವೆ. ಹಾಗೆಯೇ ಇಲ್ಲೊಂದು ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಾಯಿಯೊಬ್ಬಳು ತನ್ನ ಹರೆಯದ ಮಗಳಿಗೆ ಸ್ಕೂಟಿ ಚಾಲನಾ ತರಬೇತಿ ನೀಡುತ್ತಿದ್ದು, ಈ ವೇಳೆ ನಿಯಂತ್ರಣ ತಪ್ಪಿದ ಸ್ಕೂಟಿ ಸೀದಾ ರಸ್ತೆ ದಾಟಿ ಬಂದು ಅಂಗಡಿಯ ಎದುರು ಭಾಗಕ್ಕೆ ಡಿಕ್ಕಿ ಹೊಡೆದಿದ್ದು, ತಾಯಿ ಮಗಳು ಇಬ್ಬರು ಒಂದು ಕಡೆ ಬಿದ್ದರೆ ಸ್ಕೂಟಿ ಮತ್ತೊಂದು ಕಡೆ ಬಿದ್ದಿದೆ. ಉತ್ತರಪ್ರದೇಶದ ಝಾನ್ಸಿಯಲ್ಲಿ ಈ ಘಟನೆ ನಡೆದಿದೆ. 

Video Top Stories