Asianet Suvarna News Asianet Suvarna News

ಭಯಂಕರ ಬಿರುಗಾಳಿಗೆ ಛಾವಣಿಯೇ ಬಿದ್ದೋಯ್ತು! ಯುವಕ ಜಸ್ಟ್‌ ಮಿಸ್...

  • ಬಿರುಗಾಳಿಗೆ ಕೆಳಗೆ ಬಿದ್ದ ಛಾವಣಿ
  • ಕ್ಷಣದಲ್ಲಿ ಪಾರಾದ ಯುವಕ
  • 2021ರ ವಿಡಿಯೋ ಮತ್ತೆ ವೈರಲ್
     
May 13, 2022, 4:30 PM IST

ಭಯಂಕರ ಬಿರುಗಾಳಿಗೆ ಕಟ್ಟಟದ ಛಾವಣಿಯೊಂದು ಕುಸಿದು ಬೀಳುತ್ತಿದ್ದು, ಈ ವೇಳೆ ಕ್ಷಣ ಮಾತ್ರದಲ್ಲಿ ಯುವಕನೋರ್ವ ಅಪಾಯದಿಂದ ಪಾರಾದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದೆ. ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ 2021ರ ಫೆಬ್ರವರಿಯಲ್ಲಿ ನಡೆದ ಘಟನೆ ಇದಾಗಿದೆ. ಚಂಡಮಾರುತದ ಸಮಯದಲ್ಲಿ ಬಲವಾದ ಗಾಳಿಯಿಂದ ಅಂಗಡಿಯ ಮೇಲ್ಛಾವಣಿ ಕುಸಿದಿದೆ. ಈ ವೇಳೆ ಯುವಕನೊಬ್ಬ ಅಲ್ಲೇ ಇದ್ದು, ಛಾವಣಿ ಬೀಳುವ ಕೆಲ ಕ್ಷಣಗಳ ಮೊದಲು ಆತ ಅಲ್ಲಿಂದ ಬೇರೆಡೆ ಹೋಗುತ್ತಾನೆ. ಆತ ಹೋಗಲೆಂದೇ ಕಾಯುತ್ತಿದ್ದೆ ಎಂಬಂತೆ ಕ್ಷಣದಲ್ಲೇ ಛಾವಣಿ ಕೆಳಗೆ ಬೀಳುತ್ತದೆ. ಇದರ ವಿಡಿಯೋ ಈಗ ವೈರಲ್ ಆಗುತ್ತಿದೆ.