Asianet Suvarna News Asianet Suvarna News

ಚಲಿಸುತ್ತಿದ್ದ ಬೈಕ್ ಮೇಲೆ ಮಲಗಿ ರೈಡ್ ಮಾಡೋ ಶೋಕಿಲಾಲಾ..!

ಉತ್ತರಪ್ರದೇಶದ ನೋಯ್ಡಾದಲ್ಲಿ ಯುವಕನೋರ್ವ ಶಕ್ತಿಮಾನ್ ರೀತಿ ಸ್ಟಂಟ್‌ ಮಾಡಲು ಹೋಗಿ ಕಂಬಿ ಎಣಿಸುವಂತೆ ಮಾಡಿದ್ದಾನೆ.
 

ಇಲ್ಲೊಬ್ಬ ಶೋಕಿಲಾಲಾ ಚಲಿಸ್ತಿದ್ದ ಬೈಕ್ ಮೇಲೆ ಮಲಗಿ ರೈಡ್ ಮಾಡಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಶಕ್ತಿಮಾನ್ ರೀತಿ ಪೋಸ್‌ ಕೊಟ್ಟ ಆತನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ನೋಯ್ಡಾದ ಹಳ್ಳಿಯೊಂದರ ಯುವಕ ವಿಕಾಸ್ ಸಾಮಾಜಿಕ ಜಾಲತಾಣದಲ್ಲಿ ತನ್ನ ಸ್ಟಂಟ್ ವೈರಲ್ ಆಗಬೇಕು, ಜನ ತನ್ನ ಬಗ್ಗೆ ಮಾತನಾಡಬೇಕು ಎಂದು ಸ್ಟಂಟ್ ಮಾಡಿದ್ದಾನೆ. ಚಲಿಸುತ್ತಿರುವ ಬೈಕ್‌ನಲ್ಲಿ ಮಲಗಿಕೊಂಡು ಹೋಗುತ್ತಿರುವ ಸ್ಟಂಟ್ ಮಾಡಿದ್ದಾನೆ. ಇದನ್ನು ಚಿತ್ರೀಕರಿಸಲು ತನ್ನ ಇಬ್ಬರು ಗೆಳೆಯರ ಸಹಾಯ ಪಡೆದಿದ್ದಾನೆ. ಆದರೆ ಈತನ ವಿಡಿಯೋ ವೈರಲ್ ಆಗುವ ಮೊದಲೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. 

Video Top Stories