
ಯಶ್ ಅಭಿಮಾನಿಗಳೇ ಇದೋ ನಿಮ್ಮ ಗಮನಕ್ಕೆ, ಹೊಸ ವರ್ಷಕ್ಕೆ ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕೋಕೆ ರೆಡಿಯಾಗಿ
ಕೆಜಿಎಫ್ 2 ರ ನಂತರ ಯಶ್ ಅಭಿಮಾನಿಗಳು ಟಾಕ್ಸಿಕ್ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಯಶ್ ಅವರ ಹುಟ್ಟುಹಬ್ಬದಂದು ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುವ ಸಾಧ್ಯತೆಯಿದೆ. ಟಾಕ್ಸಿಕ್ ಬಿಡುಗಡೆಯನ್ನು 2025 ರ ದ್ವಿತಿಯಾರ್ಧಕ್ಕೆ ಮುಂದೂಡಲಾಗಿದ್ದು, ರಾಕಿಯ ರಾಮಾಯಣ 1 & 2 2026-2027 ರಲ್ಲಿ ಬಿಡುಗಡೆಯಾಗಲಿದೆ.
ಸದ್ಯ ಟಾಕ್ಸಿಕ್ ಮೂವಿಯ ಎರಡು ಶೆಡ್ಯೂಲ್ ಕಂಪ್ಲೀಟ್ ಆಗಿದ್ದು, ಯಶ್ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ಮುಂದಿನ 8ನೇ ತಾರೀಖು ಯಶ್ ಬರ್ತ್ಡೇ. ಕಳೆದ ಬಾರಿ ಅಭಿಮಾನಿಗಳ ಜೊತೆಗಿರದೇ ದುಬೈಗೆ ತೆರಳಿದ್ರು ಯಶ್. ಈ ನಡುವೆ ಗದಗ್ನಲ್ಲಿ ಯಶ್ ಅಭಿಮಾನಿಗಳು ಕಟೌಟ್ ಕಟ್ಟೋದಕ್ಕೆ ಹೋಗಿ ವಿದ್ಯುತ್ ತಂತಿ ತಗುಲಿ ಜೀವ ಕಳೆದುಕೊಂಡಿದ್ರು. ಸೋ ಈ ಸಾರಿ ಯಶ್ ಅಭಿಮಾನಿಗಳ ಜೊತೆಗೇ ಬರ್ತ್ಡೇ ಸೆಲೆಬ್ರೇಟ್ ಮಾಡಿಕೊಳ್ಳೋದಕ್ಕೆ ಪ್ಲ್ಯಾನ್ ಮಾಡ್ತಾ ಇದ್ದಾರೆ.