Asianet Suvarna News Asianet Suvarna News

Instagramನಿಂದ ಹೊಸ ಸೌಲಭ್ಯ; ಬಳಕೆದಾರರಿಗೆ ಟೆನ್ಶನ್ ಕಮ್ಮಿ!

ಜನಪ್ರಿಯ ಸೋಶಿಯಲ್ ಮೀಡಿಯಾ ತಾಣ Instagramನಲ್ಲಿ ಹೊಸ ವ್ಯವಸ್ಥೆ | ಭಾರತದಲ್ಲಿ Nubia Red Magic 3  ಬಿಡುಗಡೆ | ಟ್ವಿಟ್ಟರ್‌ನಿಂದ ಮತ್ತೆ "Twitter to Mac" ಸೌಲಭ್ಯ | ಶ್ಯೋಮಿ ಕಂಪನಿಯ ಬಿಡಿಭಾಗ ತಯಾರಕ ಘಟಕಕ್ಕೆ ಚಾಲನೆ |

ಜನಪ್ರಿಯ ಸೋಶಿಯಲ್ ಮೀಡಿಯಾ ತಾಣ Instagram, ಈಗ in-app account recovery ವ್ಯವಸ್ಥೆಯನ್ನು ಪರಿಚಯಿಸುತ್ತಿದೆ.  ಈ ಹೊಸ ವ್ಯವಸ್ಥೆಯಲ್ಲಿ,  ಬಳಕೆದಾರರಿಗೆ ತಮ್ಮ ಖಾತೆಗಳನ್ನು ಸುಲಭವಾಗಿ ರಿಕವರ್ ಮಾಡಬಹುದು. ಹ್ಯಾಕರ್‌ಗಳಿಗೂ ಇನ್ಮುಂದೆ  Instagram ಅಕೌಂಟ್ ಹ್ಯಾಕ್ ಮಾಡೋದು ಕೂಡಾ ಕಷ್ಟಕರವಾಗಲಿದೆ.  

Nubia Red Magic 3 ಇಂದು ಭಾರತದಲ್ಲಿ ಬಿಡುಗಡೆಯಾಗಿದೆ. ಗೇಮರ್ರ್ಸ್‌ಗಳನ್ನು ಆಕರ್ಷಿಸಲು, ಈ ಹೊಸ ಫೋನ್ AMOLED display ಹಾಗೂ 90Hz ರಿಫ್ರೆಶ್ ರೇಟನ್ನು ಹೊಂದಿದೆ. ಉಷ್ಣತೆ ನಿಯಂತ್ರಿಸಲು centrifugal fan ಹೊಂದಿರುವ ಮೊದಲ ಫೋನ್ ಎಂಬ ಹೆಗ್ಗಳಿಕೆಗೆ   Nubia Red Magic 3  ಪಾತ್ರವಾಗಿದೆ.

"Twitter to Mac" ಸೌಲಭ್ಯವನ್ನು ಮತ್ತೆ ಪರಿಚಯಿಸುವುದಾಗಿ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್ ಪ್ರಕಟಿಸಿದೆ. ಇದಕ್ಕಾಗಿ ಆ್ಯಪಲ್‌ನ  Pro ಎಂಬ ಪ್ರಾಜೆಕ್ಟ್ ಕ್ಯಾಟಲಿಸ್ಟನ್ನು ಬಳಸಲಾಗುವುದು.

ಶ್ಯೋಮಿ ಸರಬರಾಜು ಮಾಡುವ ಹೋಲಿಟೆಕ್ ಟೆಕ್ನಾಲಜಿ ಕಂಪನಿಯು ಗ್ರೇಟರ್ ನೋಯ್ಡಾದಲ್ಲಿ ತನ್ನ ಮೊದಲ ಬಿಡಿಭಾಗ ತಯಾರಕ ಘಟಕಕ್ಕೆ ಚಾಲನೆ ನೀಡಿದೆ. ಮುಂಬರುವ 3 ವರ್ಷಗಳಲ್ಲಿ ಸುಮಾರು 1397 ಕೋಟಿ ರೂಪಾಯಿಯನ್ನು ಇಲ್ಲಿ ಹೂಡುವುದಾಗಿ ಕಂಪನಿಯು ಹೇಳಿದೆ.  
 
ಚೀನಾದ ಸ್ಮಾರ್ಟ್‌ಫೋನ್ ದಿಗ್ಗಜ ಶ್ಯೋಮಿಯು ತನ್ನ ಮುಂಬರುವ ಫೋನ್‌ನಲ್ಲಿ,  Samsungನ 64-megapixel sensor ನ್ನು  ಬಳಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. Samsungನ  Tetracell  ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಲಾದ  64-megapixel ISO CELL Bright GW1 sensor ಮಂದ ಬೆಳಕಿನಲ್ಲೂ 16-megapixel ಚಿತ್ರಗಳನ್ನು ಸೆರೆಹಿಡಿಯಬಲ್ಲುದು. 

Video Top Stories