Asianet Suvarna News Asianet Suvarna News

‘ರೋಷನ್ ಬೇಗ್, ಜಮೀರ್‌ ಖಾನ್‌ರನ್ನು ಲಾಕಪ್‌ಗೆ ಹಾಕಿ ಬೆಂಡೆತ್ತಿ, ಸತ್ಯ ಹೊರಬರುತ್ತೆ’

ರಾಜ್ಯವನ್ನು ಬೆಚ್ಚಿ ಬೀಳಿಸಿದ IMA ಬಹುಕೋಟಿ ವಂಚನೆ; ನಾಪತ್ತೆಯಾಗಿರುವ ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್; ಸಂಸ್ಥೆಯ ಜೊತೆ ರೋಷನ್ ಬೇಗ್, ಜಮೀರ್ ಅಹಮದ್ ಖಾನ್ ಹೆಸರು ಥಳಕು 
 

ಬೆಂಗಳೂರು (ಜೂ.14): IMA ಬಹುಕೋಟಿ ವಂಚನೆ ಪ್ರಕರಣದಲ್ಲಿ ಸತ್ಯ ಹೊರ ಬರಬೇಕಾದರೆ ಶಿವಾಜಿನಗರ ಶಾಸಕ, ಕಾಂಗ್ರೆಸ್ ಪ್ರಭಾವಿ ನಾಯಕ ರೋಷನ್ ಬೇಗ್ ಮತ್ತು ಸಚಿವ ಜಮೀರ್ ಅಹಮದ್ ಖಾನ್‌ರನ್ನು ಲಾಕಪ್‌ಗೆ ಹಾಕಿ, ಬೆಂಡೆತ್ತಬೇಕು ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು.  

ಜಿಂದಾಲ್ ಕಂಪನಿಗೆ ಭೂಮಿ ಮಾರುವ ಸರ್ಕಾರದ ಕ್ರಮದ ವಿರುದ್ಧ ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಈಶ್ವರಪ್ಪ,  ರಾಜ್ಯದಲ್ಲಿ ಮಾರಾಟಗಾರರ ಸರ್ಕಾರ ಅಸ್ತಿತ್ವದಲ್ಲಿದೆ,  ಕಮಿಷನ್ ಸಿಕ್ಕರೆ ಜಮೀರ್ ಮತ್ತು ರೋಷನ್ ಬೇಗ್ ಬೇಕಾದ್ರೆ ವಿಧಾನಸೌಧವನ್ನೇ ಮಾರಿಬಿಡ್ತಾರೆ, ಎಂದು ಗುಡುಗಿದರು.

ಹೂಡಿಕೆದಾರರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿ IMA ಮಾಲೀಕ ಮನ್ಸೂರ್ ಖಾನ್ ನಾಪತ್ತೆಯಾಗಿದ್ದು,  ಸಂಸ್ಥೆಯ 7 ಮಂದಿ ನಿರ್ದೇಶಕರು ಪೊಲೀಸರ ಮುಂದೆ ಶರಣಾಗಿದ್ದಾರೆ. IMA ಸಂಸ್ಥೆ ಜೊತೆ ರೋಷನ್ ಬೇಗ್, ಜಮೀರ್ ಅಹಮದ್ ಹೆಸರು ಕೂಡಾ ಥಳಕು ಹಾಕಿಕೊಂಡಿರುವುದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಅವರಿಬ್ಬರೂ, ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳನ್ನು ನಿರಾಕರಿಸಿದ್ದಾರೆ.

Video Top Stories