
ತಲೈವಾಗೆ ಮನೆಯಲ್ಲೇ ಟೆಂಪಲ್ ಕಟ್ಟಿದ ಅಭಿಮಾನಿ
ಕಂಗನಾ ರಣಾವತ್ ನಟನೆ ಮತ್ತು ನಿರ್ದೇಶನದ 'ಎಮರ್ಜೆನ್ಸಿ' ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ರಜನಿಕಾಂತ್ ಅವರಿಗೆ ಅಭಿಮಾನಿಯೊಬ್ಬರು ಮನೆಯಲ್ಲಿ ದೇವಸ್ಥಾನ ನಿರ್ಮಿಸಿದ್ದಾರೆ. ಹರಿಪ್ರಿಯಾ ಸೀಮಂತ ಶಾಸ್ತ್ರದಲ್ಲಿ ತಾರೆಯರು ಭಾಗವಹಿಸಿದ್ದಾರೆ.
ಕಂಗನಾ ರಣಾವತ್ ನಟನೆ ನಿರ್ದೇಶನದ ಎಮರ್ಜೆನ್ಸಿ ಸಿನಿಮಾ ಹಲವು ವಿವಾದಗಳ ನಡುವೆ ಸಿಲುಕಿ , ಸೆನ್ಸಾರ್ ಜೊತೆಗೆ ಫೈಟ್ ಮಾಡಿ ಕೊನೆಗೂ ರಿಲೀಸ್ ಹಂತಕ್ಕೆ ಬಂದಿದೆ. ಜನವರಿ 17ಕ್ಕೆ ಸಿನಿಮಾ ವರ್ಲ್ಡ್ ವೈಡ್ ತೆರೆಗೆ ಬರಲಿದ್ದು , ರಿಲೀಸ್ಗೂ ಮುನ್ನ ಚಿತ್ರದ ಎರಡನೇ ಟ್ರೈಲರ್ ಹೊರಬಂದಿದೆ. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಸುತ್ತ ಸುತ್ತುವ ಕಥೆ ಇರೋ ಈ ಸಿನಿಮಾದಲ್ಲಿ ಕಂಗನಾ ಇಂದಿರೆಯ ಪಾತ್ರದಲ್ಲಿ ಮಿಂಚಿದ್ದಾರೆ. ಈ ಟ್ರೈಲರ್ಗೆ ಮಸ್ತ್ ರೆಸ್ಪಾನ್ಸ್ ಬರ್ತಾ ಇದ್ದು ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಸೃಷ್ಟಿಯಾಗಿದೆ.