Asianet Suvarna News Asianet Suvarna News

IMA ವಂಚನೆ: ಸಚಿವ ಜಮೀರ್‌ ಕೊರಳಿಗೆ ED ಸಂಕಷ್ಟ!

Jun 28, 2019, 7:01 PM IST

ಬೆಂಗಳೂರು (ಜೂ. 28): IMA ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮದ್ ಖಾನ್‌ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ನೋಟಿಸ್ ನೀಡಲು ಜಮೀರ್ ಸರ್ಕಾರಿ ನಿವಾಸಕ್ಕೆ ತೆರಳಿದ್ದ ED ಅಧಿಕಾರಿಗಳು ಸುಮಾರು ಅರ್ಧ ಗಂಟೆಗಿಂತಲೂ ಹೆಚ್ಚು ಕಾಯಬೇಕಾಗಿ ಬಂತು.

ಲಕ್ಷಾಂತರ ಹೂಡಿಕೆದಾರರನ್ನು ವಂಚಿಸಿ IMA ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ ತಲೆಮರೆಸಿಕೊಂಡಿದ್ದಾನೆ. ಇತ್ತೀಚೆಗೆ ವಿಡಿಯೋ ಕ್ಲಿಪ್ ಮೂಲಕ ಪ್ರತ್ಯಕ್ಷವಾಗಿದ್ದ ಮನ್ಸೂರ್, ತಾನು ಶರಣಾಗಲು ಸಿದ್ಧ ಎಂದು ಹೇಳಿಕೊಂಡಿದ್ದ.  

IMA ಜೊತೆ ಜಮೀರ್ ಅಹಮದ್ ಖಾನ್ ಹೆಸರು ಕೂಡಾ ಥಳುಕು ಹಾಕಿಕೊಂಡಿದೆ. IMA ಜೊತೆ ಜಮೀನು ಮಾರಾಟದ ವ್ಯವಹಾರ ನಡೆದಿತ್ತು ಎಂದು ಜಮೀರ್ ಈ ಹಿಂದೆ ಸ್ಪಷ್ಟನೆ ನೀಡಿದ್ದು, ED ಇದೇ ವಿಚಾರವಾಗಿ ನೋಟಿಸ್ ಜಾರಿ ಮಾಡಿದೆಯೆನ್ನಲಾಗಿದೆ.