Asianet Suvarna News Asianet Suvarna News

ಕುಡಿದು ರಸ್ತೆ ಬದಿ ಮಹಿಳೆಯ ಡಾನ್ಸ್‌: ವಿಡಿಯೋ ವೈರಲ್‌

ತಲೆ ಮೇಲೆ ಬಿಯರ್ ಬಾಟಲಿ ಹೊತ್ತು ಕುಡುಕಿಯ ಸ್ಟೆಪ್ 
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಘಟನೆ
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಚಿಕ್ಕಮಗಳೂರು : ಒಳಗೆ ಸೇರಿದರೆ ಗುಂಡು, ಹುಡುಗಿ ಆಗುವಳು ಗಂಡು ಬಿಸಿಯಾಗಿದೆ ನಶೆ ಏರಿದೆ ಮಿತಿ ಮೀರಿದೆ ಜೋಪಾನ ಎಂಬ ಹಾಡನ್ನು ನೀವು ಕೇಳಿರಬಹುದು. ಆದೇ ರೀತಿ ಕುಡುಕಿ ಮಹಿಳೆಯೊಬ್ಬಳು ತಲೆ ಮೇಲೆ ಬಿಯರ್ ಬಾಟಲಿ ಹೊತ್ತು ಸ್ಟೆಪ್ ಹಾಕಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೈತುಂಬಾ ಸೆರಗೊದ್ದು ಮಹಿಳೆ ರಸ್ತೆ ಮಧ್ಯೆಯೇ ಸ್ಟೆಪ್ ಹಾಕಿದ್ದು, ನೋಡುಗರನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತಿದೆ. ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ.ಕುಡಿದ ಮತ್ತಿನಲ್ಲಿ ನಡು ರಸ್ತೆಯಲ್ಲಿ ಮಹಿಳೆಯ ನೃತ್ಯ ನೋಡುಗರನ್ನು ದಂಗುಬಡಿಸುತ್ತಿದೆ. 

Video Top Stories