ನಿತ್ಯಾನಂದ ಪತ್ತೆ ಮಾಡುವಂತೆ ಹೈಕೋರ್ಟ್‌ಗೆ ಮೊರೆ..!
ಬಿಡದಿ ನಿತ್ಯಾನಂದನ ಮೇಲಿನ ಅತ್ಯಾಚಾರ ಕೇಸು ವರ್ಗಾವಣೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ನಿತ್ಯಾನಂದ ಅವರ ಮಾಜಿ ಕಾರು ಚಾಲಕ ಲೆನಿನ್ ಹೈ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರು(ಡಿ.10): ಬಿಡದಿ ನಿತ್ಯಾನಂದನ ಮೇಲಿನ ಅತ್ಯಾಚಾರ ಕೇಸು ವರ್ಗಾವಣೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ನಿತ್ಯಾನಂದ ಅವರ ಮಾಜಿ ಕಾರು ಚಾಲಕ ಲೆನಿನ್ ಹೈ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ನಿತ್ಯಾನಂದ ಕಾರು ಚಾಲಕ ಲೆನಿನ್ ನಿತ್ಯಾನಂದ ಪತ್ತೆ ಮಾಡುವಂತೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ರಾಮನಗರದಿಂದ ಬೆಂಗಳೂರಿಗೆ ಪ್ರಕರಣ ವರ್ಗಾಯಿಸಬೇಕು. ಅವರು ವಿಚಾರಣೆಗೆ ಹಾಜರಾಗುತ್ತಿಲ್ಲ. ವಿಚಾರಣೆಗೆ ಹಾಜರಾಗಲು ಸೂಚಿಸಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಸರ್ಕಾರಿ ವಕೀಲರ ಅಭಿಪ್ರಾಯ ಕೇಳಿರುವ ಹೈಕೋರ್ಟ್ ಡಿಸೆಂಬರ್ 12ಕ್ಕೆ ವಿಚಾರಣೆ ಮುಂದೂಡಿದೆ.
ನಿತ್ಯಾನಂದ ನಮ್ಮ ರಾಷ್ಟ್ರದಲ್ಲಿಲ್ಲ: ಈಕ್ವೆಡಾರ್!
ರಾಮನಗರ ಕೋರ್ಟ್ ವಿಚಾರಣೆಯನ್ನು ಅಮೆಗತಿಯಲ್ಲಿ ನಡೆಸುತ್ತಿದೆ. ಇದರಿಂದಾಗಿ ಪ್ರಕರಣವನ್ನು ಬೇರೆ ಜಿಲ್ಲೆಗೆ ಅಥವಾ ಬೇರೆ ಕೋರ್ಟ್ ಗೆ ವರ್ಗಾವಣೆ ಮಾಡಿಕೊಡಿ ಎಂದು ಲೆನಿನ್ ಅಹವಾಲು ಸಲ್ಲಿಸಿದ್ದಾರೆ.