Asianet Suvarna News Asianet Suvarna News

ಫಾಲ್ಸ್‌ನಲ್ಲಿ ಯುವಕನ ನೌಟಂಕಿ ಆಟ: ಜಾರಿ ಬಿದ್ದು ಮುರ್ಕೊಂಡ ಸೊಂಟ

  • ಶ್ರೀನಿವಾಸಸಾಗರ ಜಲಾಶಯವನ್ನು ಏರಲು ಹೋದ ಯುವಕ
  • ಅರ್ಧದಿಂದ ಬಿದ್ದು ಸೊಂಟ ಮುರಿದುಕೊಂಡ
  • ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಘಟನೆ
     

ಪ್ರಕೃತಿ ಸೌಂದರ್ಯ ನೋಡಿ ಆನಂದಿಸಬೇಕೇ ಹೊರತು ಅದರ ವಿರುದ್ಧ ಹೋಗಬಾರದು. ಒಂದು ಪಕ್ಷ ಹೋದ್ರೆ ದೊಡ್ಡ ಅವಾಂತರ, ಅವಘಡಗಳಿಗೆ ಕಾರಣವಾಗುತ್ತೆ ಅನ್ನೋದಕ್ಕೆ ಅನೇಕ ಉದಾಹರಣೆಗಳು ಇವೆ. ಈ ಸ್ಟೋರಿಯಲ್ಲೂ ಆಗಿದ್ದು ಇದೆ. ಹುಡುಗಾಟಿಕೆಯಿಂದಲೋ ಅಥವಾ ಇನ್ಯಾರನ್ನೋ ಮೆಚ್ಚಿಸಲೋ ಹೋದ ಯುವಕ ಈಗ ಸೊಂಟ ಮುರಿದುಕೊಂಡಿದ್ದಾನೆ. ಶ್ರೀನಿವಾಸಸಾಗರ ಜಲಾಶಯದಲ್ಲಿ  ಈ ಅನಾಹುತ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಯುವಕನೊಬ್ಬ ಶ್ರೀನಿವಾಸಸಾಗರ ಜಲಾಶಯವನ್ನು ಏರಲು ಹೋಗಿ ಅರ್ಧದವರೆಗೆ ತಲುಪಿದ್ದ ಬಳಿಕ ಅಲ್ಲಿಂದ ದಿಢೀರ್ ಜಾರಿ ಬಿದ್ದಿದ್ದಾನೆ. ಪರಿಣಾಮ ಸೊಂಟ ಮುರಿದಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ‌ ನಡೆದಿದೆ.