Asianet Suvarna News Asianet Suvarna News

‘ಜಮೀರ್ ಅಹಮದ್ ಖಾನ್ ಬಂಧಿಸಿ, ವಂಚಕ ಮನ್ಸೂರ್ ಸಚಿವರ ಮನೆಯಲ್ಲಿದ್ದಾನೆ’

ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಮತ್ತು ಸಚಿವ ಜಮೀರ್ ಅಹಮದ್ ಹೆಸರು ಸಂಸ್ಥೆಯ ಜೊತೆ ಥಳಕು ಹಾಕಿಕೊಂಡಿರುವುದು ರಾಜಕೀಯಕ್ಕೆ ಎಡೆಮಾಡಿಕೊಟ್ಟಿದೆ. ಮನ್ಸೂರ್ ಪರವಾಗಿ ನಾವಿದ್ದೇವೆ ಎಂದಿರುವ ಜಮೀರ್ ಹೇಳಿಕೆ ಈಗ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ಬೆಂಗಳೂರು (ಜೂ.15): IMA ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣದಲ್ಲಿ ದೂರುಗಳ ಸಂಖ್ಯೆ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಆಡಿಯೋ ಕ್ಲಿಪ್ ಹರಿಬಿಟ್ಟು ನಾಪತ್ತೆಯಾಗಿರುವ ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ ದುಬೈಯಲ್ಲಿ ಅಡಗಿದ್ದಾನೆಂದು ಹೇಳಲಾಗುತ್ತಿದೆ. ಆತನ ಬಂಧನಕ್ಕೆ ಬೆಂಗಳೂರು ಪೊಲೀಸರು ಬಲೆ ಬೀಸಿದ್ದಾರೆ.

ಇನ್ನೊಂದು ಕಡೆ, ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಮತ್ತು ಸಚಿವ ಜಮೀರ್ ಅಹಮದ್ ಹೆಸರು ಸಂಸ್ಥೆಯ ಜೊತೆ ಥಳಕು ಹಾಕಿಕೊಂಡಿರುವುದು ರಾಜಕೀಯಕ್ಕೆ ಎಡೆಮಾಡಿಕೊಟ್ಟಿದೆ. ಮನ್ಸೂರ್ ಪರವಾಗಿ ನಾವಿದ್ದೇವೆ ಎಂದಿರುವ ಜಮೀರ್ ಹೇಳಿಕೆ ಈಗ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಜಮೀರ್ ಮನೆಯಲ್ಲೇ ಮನ್ಸೂರ್ ಅಡಗಿರುವ ಸಾಧ್ಯತೆ ಇದೆ, ಆದ್ದರಿಂದ ಜಮೀರ್ ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು, ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. 

ವಂಚನೆ ಪ್ರಕರಣದ ನಿಜಾಂಶಗಳು ಹೊರ ಬರಬೇಕಾದರೆ ರೋಷನ್ ಬೇಗ್ ಮತ್ತು ಜಮೀರ್‌ರನ್ನು ಲಾಕಪ್‌ಗೆ ಹಾಕಿ ಬೆಂಡೆತ್ತಬೇಕೆಂದು ಶುಕ್ರವಾರ ಬಿಜೆಪಿ ನಾಯಕ ಈಶ್ವರಪ್ಪ ಆಗ್ರಹಿಸಿದ್ದರು. ಶಿವಾಜಿನಗರ ಶಾಸಕ ರೋಷನ್ ಬೇಗ್ ಮತ್ತು ಸಚಿವ ಜಮೀರ್ ಅಹಮದ್ ಖಾನ್ ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳನ್ನು ನಿರಾಕರಿಸಿದ್ದಾರೆ.  
 

Video Top Stories