ಅಸಾನಿ ಚಂಡಮಾರುತದ ಆರ್ಭಟ: ಅಲ್ಲಲ್ಲಿ ಮಳೆ

  • ಅಸಾನಿ ಚಂಡಮಾರುತದ ಆರ್ಭಟ ಹೇಗಿದೆ.
  • ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರಿ ಮಳೆ ಸಾಧ್ಯತೆ
  • ವರ್ಷದ ಮೊದಲ ಚಂಡಮಾರುತ ಅಸಾನಿ

Share this Video
  • FB
  • Linkdin
  • Whatsapp

ದೇಶದೆಲ್ಲೆಡೆ ಬೇಸಿಗೆಯ ಬಿಸಿ ತಾಪ ಜನರನ್ನು ಕಂಗೆಡಿಸಿದೆ. ಈ ಮಧ್ಯೆ ಅಸಾನಿ ಚಂಡಮಾರುತ ದಾಂಗುಡಿ ಇಡಲು ಸಜ್ಜಾಗುತ್ತಿದೆ. ಆಗ್ನೇಯ ಬಂಗಾಳ ಕೊಲ್ಲಿಯ ಕಡಿಮೆ ಒತ್ತಡದ ಪ್ರದೇಶವು ಶೀಘ್ರದಲ್ಲೇ 'ಅಸಾನಿ' ಚಂಡಮಾರುತವಾಗಿ ಬದಲಾಗಲಿದೆ. ವರ್ಷದ ಮೊದಲ ಚಂಡಮಾರುತವಾಗಿರುವ ಅಸಾನಿಯಿಂದಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಳೆಯ ನಿರೀಕ್ಷೆಯಾಗಿದೆ. ಅಲ್ಲದೇ ದೇಶದ ಎಂಟು ರಾಜ್ಯಗಳಲ್ಲಿ ಇದು ಕರಾಳ ಪರಿಣಾಮ ಬೀರಲಿದೆ ಎಂದು ಹವಾಮಾನ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ. ಇನ್ನು ಈ ಚಂಡಮಾರುತಕ್ಕೆ ಶ್ರೀಲಂಕಾ ಅಸಾನಿ ಎಂಬ ಹೆಸರನ್ನಿಟ್ಟಿದೆ. ಅಸಾನಿ ಎಂದರೆ ಸಿಂಹಳ ಭಾಷೆಯಲ್ಲಿ ಪ್ರಚಂಡ ಕೋಪ ಎಂದರ್ಥ. ಈ ಚಂಡಮಾರುತದ ಬಗ್ಗೆ ಇನ್ನಷ್ಟು ಮಾಹಿತಿ ಈ ವಿಡಿಯೋದಲ್ಲಿದೆ ನೋಡಿ. 

Related Video