Asianet Suvarna News Asianet Suvarna News

ರೌಡಿಗಳಿಗೆ ಸಿಂಹಸ್ವಪ್ನವಾಗಿರುವ ಅಲೋಕ್ ಕುಮಾರ್ ಈಗ ಬೆಂಗಳೂರು ಕಮಿಷನರ್!

ರಾಜ್ಯ ಸರ್ಕಾರವು  ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ. ರಾಜ್ಯದ ಒಟ್ಟು 19 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.  ಬೆಂಗಳೂರಿಗೆ ಹೊಸ ಪೊಲೀಸ್ ಕಮಿಷನರ್ ನೇಮಕ ಮಾಡಲಾಗಿದೆ. 

ಬೆಂಗಳೂರು (ಜೂ. 17):  ರಾಜ್ಯ ಸರ್ಕಾರವು  ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ. ರಾಜ್ಯದ ಒಟ್ಟು 19 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಬೆಂಗಳೂರಿಗೆ ಹೊಸ ಪೊಲೀಸ್ ಕಮಿಷನರ್ ನೇಮಕ ಮಾಡಲಾಗಿದೆ. 

ಕಳೆದ ವರ್ಷ ಸೆಪ್ಟಂಬರ್‌ನಲ್ಲಿ CCB ಆಯುಕ್ತರಾಗಿ ನೇಮಕವಾಗಿದ್ದ, ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಈಗ ಬೆಂಗಳೂರು ನಗರದ ಪೊಲೀಸ್ ಕಮಿಷನರ್ ಆಗಿ ನಿಯುಕ್ತರಾಗಿದ್ದಾರೆ. ನಿಕಟಪೂರ್ವ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರನ್ನು, ನೇಮಕಾತಿ ವಿಭಾಗದ ADGPಯಾಗಿ ವರ್ಗಾಯಿಸಲಾಗಿದೆ. 

ರೌಡಿಗಳಿಗೆ ಸಿಂಹಸ್ವಪ್ನವಾಗಿದ್ದ ಅಲೋಕ್ ಕುಮಾರ್,  ಬೆಂಗಳೂರು ನಗರ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ, ರೌಡಿಗಳ ಅಟ್ಟಹಾಸ ನಿಲ್ಲಿಸುವ ಕಾರ್ಯಕ್ಕೆ ಕೈ ಹಾಕಿದ್ದರು. ಈ ಹಿಂದೆ, 2010ರಲ್ಲಿ ಅವರು ಬೆಂಗಳೂರಿನಲ್ಲಿ ಡಿಸಿಪಿಯಾಗಿ, ಜಂಟಿ ಪೊಲೀಸ್‌ ಆಯುಕ್ತರಾಗಿ ಅವರು ಸೇವೆ ಸಲ್ಲಿಸಿದ್ದರು. ಬಳಿಕ  ಆ್ಯಂಟಿ ನಕ್ಸಲ್ ಫೋರ್ಸ್‌ನ ಮುಖ್ಯಸ್ಥರಾಗಿ, ತರಬೇತಿ ವಿಭಾಗದ IGPಯಾಗಿ ಸೇವೆ ಸಲ್ಲಿಸಿದ್ದರು.  

Video Top Stories