
ಇದೇ ವರ್ಷ ಮತ್ತೊಂದು ಶೋ ಮೂಲಕ ಕಿಚ್ಚನ ರೀ-ಎಂಟ್ರಿ!
ಬಿಗ್ ಬಾಸ್ ಸೀಸನ್ 11ರ ಗ್ರ್ಯಾಂಡ್ ಫಿನಾಲೆಯೊಂದಿಗೆ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆಗೆ ವಿದಾಯ ಹೇಳಿದ್ದಾರೆ. ಆದರೆ, ಕಿಚ್ಚನ ಅಭಿಮಾನಿಗಳಿಗೆ ಬೇಸರ ಬೇಡ, ಕಿರುತೆರೆಯಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಬಿಗ್ ಬಾಸ್ ಸೀಸನ್ -11 ಮುಕ್ತಾಯಗೊಳ್ತಿದೆ. ಇದು ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಬರಲಿರೋ ಕೊನೆಯ ಸೀಸನ್ ಅನ್ನೋದು ಗೊತ್ತೇ ಇದೆ. ಸೋ ಸಹಜವಾಗೇ ಬಿಗ್ ಬಾಸ್ ಫಿನಾಲೆ ಖುಷಿಗಿಂತ ಕಿಚ್ಚನ ಫ್ಯಾನ್ಸ್ಗೆ ಬೇಸರ ತಂದಿದ್ದು ಸುಳ್ಳಲ್ಲ. ಇನ್ಮುಂದೆ ಕಿಚ್ಚನನ್ನ ಬಿಗ್ ಬಾಸ್ ವೇದಿಕೆ ಮೇಲೆ ನೋಡೋದಕ್ಕಂತೂ ಆಗಲ್ಲ. ಆದ್ರೆ ಸುದೀಪ್ ಕಿರುತೆರೆ ಕಡೆ ಬರೋದೇ ಇಲ್ವಾ..? ಇನ್ಮುಂದೆ ಸ್ಮಾಲ್ ಸ್ಕ್ರೀನ್ನಲ್ಲಿ ಕಿಚ್ಚನನ್ನ ನೋಡೋದಕ್ಕೆ ಸಾಧ್ಯವೇ ಇಲ್ವಾ..? ಆ ಕುರಿತಾದ ಒಂದು ಇನ್ ಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ