ದರ್ಶನ್ ಜೈಲಿಗೆ ಹೋಗಿ 50 ದಿನ.. ದರ್ಶನ್ ನಂಬಿದ್ದ ಗ್ಯಾಂಗ್‌ನ ಕುಟುಂಬಸ್ಥರ ಆಕ್ರಂದನ
ದರ್ಶನ್ ಜೈಲು ಸೇರಿ 50 ದಿನವಾಗಿದೆ ದರ್ಶನ್ ಬಿಡುಗಡೆಗೆ ಪತ್ನಿ ವಿಜಯಲಕ್ಷ್ಮೀ ಚಡಪಡಿಸ್ತಿದ್ರೆ ಇತ್ತ ಉಳಿದ ಆರೋಪಿಗಳ ಹೆತ್ತವರು ಸಂಕಟ ಪಡುತ್ತಿದ್ದಾರೆ. ಈ 50 ದಿನದ ಒಂದೊಂದು ಕ್ಷಣಗಳಲ್ಲಿ ನರಕಯಾತನೆ ಅನುಭವಿಸಿದ್ದಾರೆ ಈ ಬಗ್ಗೆ ಡಿಟೇಲ್ಡ್ ಸ್ಟೋರಿ ಇಲ್ಲಿದೆ.
ದರ್ಶನ್ C/o ಪರಪ್ಪನ ಅಗ್ರಹಾರ.. ಜೈಲಿಗೆ ಹೋಗಿ 50 ದಿನ ಕಳೆದಿದೆ. ಗಂಡನ ಬಿಡುಗಡೆಗಾಗಿ ವಿಜಯಲಕ್ಷ್ಮಿ ದರ್ಶನ್ ಹೋಮ ಹವನ ಮಾಡ್ತಾನೆ ಇದ್ದಾರೆ. ಈ ಮಧ್ಯೆ ದರ್ಶನ್ ವಿರುದ್ಧ ಬಹಳ ಪ್ರಬಲವಾದ ಸಾಕ್ಷಿಗಳು ತನಿಖಾ ತಂಡಕ್ಕೆ ಸಿಕ್ಕಿವೆ. ಇತ್ತ ದರ್ಶನ್ ನಂಬಿ ಜೈಲು ಸೇರಿದ ಆರೋಪಿಗಳು, ಮನೆಯವರು 50 ದಿನದಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಒಬ್ಬ ಹೆತ್ತವಳನ್ನೇ ಕಳೆದುಕೊಂಡ್ರೆ, ಇನ್ನೊಬ್ಬ ತಂದೆಯನ್ನ ಕಳೆದುಕೊಂಡು ಜೈಲಲ್ಲೇ ನರಳುತ್ತಿದ್ದಾನೆ. ಹಾಗಾದ್ರೆ ಈ 50 ದಿನದಲ್ಲಿ ಏನೇನಾಯ್ತು ಇಲ್ಲಿದೆ ಡಿಟೇಲ್ಡ್ ಸ್ಟೋರಿ