ಅನಿರುದ್ಧ ಸರ್‌ಗೆ ಬಹಿಷ್ಕಾರ ಒಪ್ಪಲ್ಲ, ಅದು ಶುದ್ಧ ತಪ್ಪು, ಕೆಟ್ಟ ಎಕ್ಸಾಂಪಲ್: ಫ್ಯಾನ್ಸ್‌ ಆಕ್ರೋಶ

ಕನ್ನಡ ಕಿರುತೆರೆಯಿಂದ 2 ವರ್ಷಗಳ ಕಾಲ ಅನಿರುದ್ಧ್  ಅವರನ್ನು ಬಹಿಷ್ಕರಿಸಿರುವುದಕ್ಕೆ  ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.  

First Published Aug 23, 2022, 10:34 PM IST | Last Updated Aug 23, 2022, 10:34 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿಯ ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ್ ಹಾಗೂ ನಿರ್ದೇಶಕ ಆರೂರು ಜಗದೀಶ್ ಮಧ್ಯೆ ಭಿನ್ನಾಭಿಪ್ರಾಯ ತಾರಕಕ್ಕೇರಿದೆ. ಅನಿರುದ್ಧ್ ವಿರುದ್ಧ ಆರೂರು ಜಗದೀಶ್ ಆರೋಪ ಮಾಡಿದ ಪರಿಣಾಮ, ಕನ್ನಡ ಕಿರುತೆರೆಯಿಂದ 2 ವರ್ಷಗಳ ಕಾಲ ಅನಿರುದ್ಧ್  ಅವರನ್ನು ಬಹಿಷ್ಕರಿಸಲಾಗಿದೆ.  ಅನಿರುದ್ಧ್ ಅವರನ್ನ ಹೊರಗಿಟ್ಟಿದ್ದಕ್ಕೆ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.  ಹೊಟ್ಟೆಕಿಚ್ಚಿನಿಂದ ಈ ರೀತಿ ಮಾಡಿದ್ದಾರೆ.  ಸೀರಿಯಲ್ ಫೇಮಸ್‌ ಆಗೋದು ಆ್ಯಕ್ಟಿಂಗ್‌ನಿಂದ ಮಾತ್ರ, ಹೀಗಾಗಿ ಅನಿರುದ್ಧ್ ಅವರನ್ನ ಬಾಯ್ಕಾಟ್‌ ಮಾಡೋದು ಅನ್ಯಾಯ ಅಂತ ಅನಿರುದ್ಧ್  ಅಭಿಮಾನಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.