Asianet Suvarna News Asianet Suvarna News

ಮುಂಬೈ ಡ್ರಗ್ಸ್ ಪಾರ್ಟಿಯಲ್ಲಿ ಬೆಂಗಳೂರಿಗರು: ಖಂಡಿತಾ ಲಿಂಕ್ ಇದೆ ಎಂದ ಸಂಬರಗಿ

ಟೆಕ್ಕಿಗಳು ಹೊಸ ಹೊಸ ಜಾಗ ಹುಡುಕೋದು, ಮಂಗಳೂರು, ಮಣಿಪಾಲ(Manipal), ಗೋವಾ, ಪಾಂಡಿಚೇರಿ, ಮುಂಬೈನಲ್ಲಿ ಬೆಂಗಳೂರಿನ ಹೆಸರು ಕೇಳೋದು ಅಚ್ಚರಿಪಡೋ ವಿಚಾರ ಅಲ್ಲ. ಖಂಡಿತವಾಗಿಯೂ ಮುಂಬೈನಲ್ಲಿ ನಡೆದ ಪಾರ್ಟಿಗೆ ಬೆಂಗಳೂರಿಗೆ ನಂಟಿದೆ ಎಂದ ಸಂಬರಗಿ

ಬೆಂಗಳೂರು(ಅ.05): ಮುಂಬೈ(Mumbai) ಕರಾವಳಿಯಲ್ಲಿ ಐಷರಾಮಿ ಹಡಗಿನಲ್ಲಿ ನಡೆದ ಡ್ರಗ್ಸ್ ಪಾರ್ಟಿ ಬಗ್ಗೆ ಪ್ರಶಾಂತ್ ಸಂಬರಗಿ ಪ್ರತಿಕ್ರಿಯಿಸಿದ್ದಾರೆ. ಈಗ ಈ ಪ್ರಕರಣದಲ್ಲಿ ಬೆಂಗಳೂರಿಗರಿಗೂ(Bengaluru) ನಂಟಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಂಬರಗಿ ಪ್ರತಿಕ್ರಿಯಿಸಿದ್ದು ಬಾಲಿವುಡ್, ಸ್ಯಾಂಡಲ್‌ವುಡ್‌(Sandalwood) ನಂಟಿನ ಬಗ್ಗೆ ಮಾತನಾಡಿದ್ದಾರೆ.

ಮುಂಬೈ ಡ್ರಗ್ಸ್ ಕೇಸ್‌ ಲಿಂಕ್: ಬೆಂಗಳೂರಿನ 200 ಜನರ ಮೇಲೆ NCB ನಿಗಾ

ಟೆಕ್ಕಿಗಳು ಹೊಸ ಹೊಸ ಜಾಗ ಹುಡುಕೋದು, ಮಂಗಳೂರು, ಮಣಿಪಾಲ(Manipal), ಗೋವಾ, ಪಾಂಡಿಚೇರಿ, ಮುಂಬೈನಲ್ಲಿ ಬೆಂಗಳೂರಿನ ಹೆಸರು ಕೇಳೋದು ಅಚ್ಚರಿಪಡೋ ವಿಚಾರ ಅಲ್ಲ. ಖಂಡಿತವಾಗಿಯೂ ಮುಂಬೈನಲ್ಲಿ ನಡೆದ ಪಾರ್ಟಿಗೆ ಬೆಂಗಳೂರಿಗೆ ನಂಟಿದೆ. ಇದರಲ್ಲಿ ಹೆಚ್ಚು ಹೆಸರು ಹೊರಗೆ ಬರೋದಲ್ಲಿ ಡೌಟಿಲ್ಲ ಎಂದಿದ್ದಾರೆ.