Asianet Suvarna News Asianet Suvarna News

ಬನ್ನಿ ಅಂದ್ರೆ ಶೂಟಿಂಗ್‌ಗೆ ಬರ್ತೀನಿ; ಮತ್ತೆ ಚಿತ್ರೀಕರಣಕ್ಕೆ ಹೋಗಲು ಸಿದ್ಧ ಎಂದ ನಟ ಅನಿರುದ್ಧ್

ನಿರ್ಮಾಪಕ ಆರೂರು ಜಗದೀಶ್ ಮಾಡಿರುವ ಆರೋಪಗಳಿಗೆ ಅನಿರುದ್ಧ್ ಪ್ರತಿಕ್ರಿಯೆ ನೀಡದ್ದಾರೆ. ನನಗೆ ಯಶಸ್ಸು ಸಿಕ್ಕಿದ್ದು ವೀಕ್ಷಕರಿಂದ. ದುರಹಂಕಾರ ಅಂತ ಹೇಳುತ್ತಾರೆ, ನನಗೆಲ್ಲಿದೆ ದುರಹಂಕಾರ, ನನ್ನಲ್ಲಿ ದುರಹಂಕಾರ ಇದ್ದಿದ್ದರೆ, ಅಭಿನಯದಲ್ಲೂ ಕಾಣಿಸುತ್ತಿತ್ತು ಎಂದಿದ್ದಾರೆ.

First Published Aug 20, 2022, 4:21 PM IST | Last Updated Aug 20, 2022, 4:37 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ತಂಡದ ಜೊತೆ ನಟ ಅನಿರುದ್ಧ್ ಕಿರಿಕ್ ಮಾಡಿಕೊಂಡ  ಹಿನ್ನಲ್ಲೆ ಅನಿರುದ್ಧ್ ಅವರನ್ನು ಕಿರುತೆರೆಯಿಂದನೇ ಕಿಕ್ ಔಟ್ ಮಾಡಲಾಗಿದೆ. ಅನಿರುದ್ಧ್ ಅವರನ್ನು ಎರಡು ವರ್ಷಗಳ ಕಾಲ ಧಾರಾವಾಹಿಯಿಂದ ದೂರ ಇಡಲು ನಿರ್ಮಾಪಕರ ಸಂಘ ನಿರ್ಧಾರ ಮಾಡಿದೆ. ಇದರ ಬೆನ್ನಲ್ಲೇ ಇದೀಗ ನಟ ಅನಿರುದ್ಧ್ ಪತ್ರಿಕಾಗೋಷ್ಠಿ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ನಿರ್ಮಾಪಕ ಆರೂರು ಜಗದೀಶ್ ಮಾಡಿರುವ ಆರೋಪಗಳಿಗೆ ಅನಿರುದ್ಧ್ ಪ್ರತಿಕ್ರಿಯೆ ನೀಡದ್ದಾರೆ. ನನಗೆ ಯಶಸ್ಸು ಸಿಕ್ಕಿದ್ದು ವೀಕ್ಷಕರಿಂದ. ದುರಹಂಕಾರ ಅಂತ ಹೇಳುತ್ತಾರೆ, ನನಗೆಲ್ಲಿದೆ ದುರಹಂಕಾರ, ನನ್ನಲ್ಲಿ ದುರಹಂಕಾರ ಇದ್ದಿದ್ದರೆ, ಅಭಿನಯದಲ್ಲೂ ಕಾಣಿಸುತ್ತಿತ್ತು. ಅವರ ಕಣ್ಣುಗಳೇ ಗೊತ್ತಾಗುತ್ತದೆ. ನನ್ನ ಅಭಿನಯದ ಯಾವುದೇ ಸಂಭಾವಣೆಯನ್ನು ಆದರೂ ತೆಗೆದು ನೋಡಿ, ಅದರಲ್ಲಿ ಗೊತ್ತಾಗುತ್ತದೆ ಎಂದು ಹೇಳಿದರು. ಈ ಪಾತ್ರಕ್ಕಾಗಿ ನಾನು 12 ಕೆಜಿ ತೂಕ ಇಳಿಸಿಕೊಂಡಿದ್ದಾನಿ. ಇದಕ್ಕೆ ತುಂಬಾ ಕಷ್ಟ ಪಟ್ಟಿದ್ದೇನೆ. ನಾನು ಮೊದಲೆ ಹೇಳಿದ್ದೆ ಸ್ಕ್ರಿಪ್ಟ್ ಒಂದು ದಿನ ಮೊದಲೇ ಬೇಕು ಅಂತ ಆದರೂ ಸೆಟ್ ಗೆ ಬಂದಾಗ ಸ್ಕ್ರಿಪ್ಟ್ ಕೊಡುತ್ತಾರೆ. ಅದನ್ನ ಓದಲು ತುಂಬಾ ಸಮಯವಾಗುತ್ತದೆ. ಸ್ಕ್ರಿಪ್ಟ್ ವಿಚಾರಕ್ಕೆ ಅಷ್ಟೆ ಮನಸ್ತಾಪ ಆಗಿದ್ದು ಇದನ್ನು ಅವರು ಮಕ್ಕಳ ಮೇಲೆ ಕೈ ಇಟ್ಟು ಹೇಳಲಿ, ನಾನು ನನ್ನ ಮಕ್ಕಳ ಮೇಲೆ ಕೈ ಇಟ್ಟು ಹೇಳುತ್ತೇನೆ ಎಂದು ಚಾಲೆಂಜ್ ಹಾಕಿದರು. 

Video Top Stories