ಆರ್ಯವರ್ಧನ್ ಆಗಲ್ಲ ಎಂದ ಅನೂಪ್ ಭಂಡಾರಿ; 'ಜೊತೆ ಜೊತೆಯಲಿ' ಹೀರೋ ಯಾರಾಗ್ತಾರೆ?

ಕಿರುತೆರೆಯಲ್ಲಿ ಸಂಚಲನ ಮೂಡಿಸಿದ ಜೊತೆಜೊತೆಯಲಿ ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ಆಡಿಯನ್ಸ್ ನ ರಂಜಿಸುತ್ತಿದ್ದ ಟೀಂಗೆ ರಿಯಲ್ ಆಗಿ ಶಾಕ್ ಆಗಿದೆ. ನಟ ಅನಿರುದ್ಧ್ ಧಾರಾವಾಹಿಯಿಂದ ಔಟ್ ಆದ ಬಳಿಕ ಆರ್ಯವರ್ಧನ್ ಯಾರಾಗ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. 

First Published Aug 24, 2022, 4:40 PM IST | Last Updated Aug 24, 2022, 4:40 PM IST

ಕಿರುತೆರೆಯಲ್ಲಿ ಸಂಚಲನ ಮೂಡಿಸಿದ ಜೊತೆಜೊತೆಯಲಿ ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ಆಡಿಯನ್ಸ್ ನ ರಂಜಿಸುತ್ತಿದ್ದ ಟೀಂಗೆ ರಿಯಲ್ ಆಗಿ ಶಾಕ್ ಆಗಿದೆ. ಧಾರಾವಾಹಿಯಲ್ಲಿ ನಾನು ನಟಿಸೊಲ್ಲ ಅಂತ ಅನಿರುದ್ಧ್ ಹೊರ ನಡೆದಿದ್ದು, ಕಿರುತೆರೆಯವ್ರೆಲ್ಲಾ ಸೇರಿ ಅನಿರುದ್ಧ್ ಅವ್ರನ್ನ ಎರಡು ವರ್ಷಗಳ ಕಾಲ ಸ್ಮಾಲ್ ಸ್ಕ್ರೀನ್ ನಿಂದ ಬ್ಯಾನ್ ಮಾಡಿದ್ದಾರೆ. ಆರೋಪ ಪ್ರತ್ಯಾರೋಪಗಳ ನಡುವೆ ಸದ್ಯ ಈಗ ಯಾರಾಗ್ತಾರೆ ಆರ್ಯವರ್ಧನ್ ಅನ್ನೋದೆ ದೊಡ್ಡ ಪ್ರಶ್ನೆ ಆಗಿ ಉಳಿದಿದೆ..ಅನಿರುದ್ಧ್ ಮೇಲಿನ ಜಿದ್ದಿಗೆ ವಾಹಿನಿ ಟೀಂ ಕೂಡ ಮತ್ತೊರ್ವ ಆರ್ಯವರ್ಧನ್ ಹುಟ್ಟುಹಾಕಲು ಸಾಹಸ ಮಾಡ್ತಿದೆ.ಆರ್ಯವರ್ಧನ್ ಪಾತ್ರ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಸಖತ್ ಎಫೆಕ್ಟಿವ್ ಕ್ಯಾರೆಕ್ಟರ್. ತೆರೆ ಮೇಲೆ ಆರ್ಯನನ್ನ ನೋಡಲು ಪ್ರೇಕ್ಷಕರು ಕಾದಿರುತ್ತಾರೆ. ಸದ್ಯ ಸ್ಟಾರ್ ನಿರ್ದೇಶಕ ಪ್ಯಾನ್ ಇಂಡಿಯಾ ಸಿನಿಮಾ ಸರದಾರ ಆಗಿರೋ ಅನೂಪ್ ಬಂಡಾರಿಗೆ ಆರ್ಯವರ್ಧನ್ ಆಗುವ ಅವಕಾಶ ಸಿಕಿದ್ಯಂತೆ...ಕಲಾವಿದರನ್ನ ಬಿಟ್ಟು ಇವ್ರನ್ಯಾಕೆ ಸೆಲೆಕ್ಟ್ ಮಾಡಿದ್ರು ಅಂತೀರಾ ಈ ಫೋಟೋ ನೋಡಿ ನಿಮಗೂ ಇವ್ರೇ ಸೂಟ್ ಆಗ್ತಾರೆ ಅಂತ ಅನ್ನಿಸೋಕೆ ಶುರುವಾಗುತ್ತೆ.
 

Video Top Stories