ಬಿಗ್‌ಬಾಸ್ ಕಿಚ್ಚನ ಕಟಕಟೆಯಲ್ಲಿ ಭವ್ಯಾಗೆ ಖಡಕ್ ಕ್ಲಾಸ್! ಮೋಸ ಆಗಿದ್ದೆಲ್ಲಿ? ಆಗಿದ್ಯಾರಿಗೆ?
ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಮೋಸದಾಟ ನಡೆದ ಬಗ್ಗೆ ಕಿಚ್ಚ ಸುದೀಪ್ ಖಡಕ್ ಆಗಿ ಪ್ರಶ್ನಿಸಿದ್ದಾರೆ. ಭವ್ಯಾ ಗೌಡ ಅವರ ತಪ್ಪನ್ನು ಮುಚ್ಚಿಟ್ಟ ಬಿಗ್‌ಬಾಸ್ ವಿರುದ್ಧವೂ ಆರೋಪ ಕೇಳಿಬಂದಿದೆ. ಹನಮಂತು ಮತ್ತು ಧನರಾಜ್ ಈ ವಾರ ಸೇಫ್ ಆಗಿದ್ದಾರೆ.
ಕೆಲವರಿಗೆ ಕಿವಿ ಮಾತು. ಇನ್ನೂ ಕೆಲವರಿಗೆ ಮಾತಿನ ಏಟು. ಬಾದ್ ಷಾ ಜೊತೆ ವಾರದ ಆಗು-ಹೋಗುಗಳ ಬಿಸಿ ಬಿಸಿ ಚರ್ಚೆ. ಕಿಚ್ಚನ ನ್ಯಾಯ ತಕ್ಕಡಿಯಲ್ಲಿ ಸರಿ ತಪ್ಪುಗಳ ತೂಕ. ಹರಟೆ, ತಮಾಷೆ ಜೊತೆ, ಜೊತೆಗೆ ನೈಜ ಆಟದ ಪಾಠ. ತಪ್ಪು ಮಾಡಿ ವಾದಿಸಿದೋರು ತಪ್ಪಾಯ್ತೆಂದು ಕೈ ಮುಗಿದ್ರು. ಚರ್ಚೆ ಸಾಕೆಂದವರಿಗೆ ಸುದೀಪ್ ಕೊಟ್ಟಿದ್ದು ಮುಟ್ಟಿ ನೋಡಿಕೊಳ್ಳುವ ಮಾತಿನ ಪೆಟ್ಟು.
ಭವ್ಯಾ ಅಚಾತುರ್ಯವನ್ನು ಮುಚ್ಚಿಟ್ಟು, ಉಳಿದವರಿಗೆ ಮೋಸ ಮಾಡಿತಾ ಬಿಗ್‌ಬಾಸ್!
ಮೋಸದಾಟ ಆಡಿ ಕ್ಯಾಪ್ಟನ್ ಆದ ಭವ್ಯಗೆ ಕಿಚ್ಚ ಖಡಕ್ ಕ್ಲಾಸ್ ತಗೊಂಡ್ರು. ಇನ್ನೂ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಮೋಸ ನಡೆದಿತ್ತು ಅನ್ನೋದು ಗೊತ್ತಾಗಿ ಇಡೀ ದೊಡ್ಮನೆ ರಣರಂಗ ಆಗೋಯ್ತು. ನಿಜವಾದ ಕಳಪೆ ಯಾರು? ನಿಜಕ್ಕೂ ಈ ವಾರ ಚೆನ್ನಾಗಿ ಆಡಿದ್ಯಾರು? ಕಟಕಟೆಯಲ್ಲಿ ಮನೆ ಮಂದಿ ಏನ್ ಹೇಳಿದ್ರು? ಈ ವಾರ ದೊಡ್ಮನೆ ಬೆಸ್ಟ್ ಫ್ರೆಂಡ್ಸ್ ಹನಮಂತು ಮತ್ತು ಧನರಾಜ್ ಸೇಫ್ ಆದ್ರು. ಧನರಾಜ್ ಗೆ ಈ ವಾರ ಉತ್ತಮ ಜೊತೆಗೆ ಕಿಚ್ಚನ ಚಪ್ಪಾಳೆ ಕೂಡ ಸಿಕ್ಕಿತ್ತು. ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ತಪ್ಪಾದಾಗ ಬಿಗ್‌ಬಾಸ್ ಯಾಕೆ ಮಧ್ಯ ಪ್ರವೇಶಿಸಲಿಲ್ಲ ಎಂಬುದು ಹಲವರ ಪ್ರಶ್ನೆ.