ಜೊತೆ ಜೊತೆಯಲಿ ಸೀರಿಯಲ್‌ಗೆ ನಟ ಅನಿರುದ್ಧ ಪಡೆಯುತ್ತಿದ್ದ ಸಂಭಾವನೆ ಇಷ್ಟು?

ನಟ ಅನಿರುದ್ಧ್ ಕಿರುತೆರೆಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ. ಹೀಗಂತ ಜೊತೆ ಜೊತೆಯಲಿ ಧಾರಾವಾಹಿ ನಿರ್ಮಾಪಕ ಅರೂರು ಜಗದೀಶ್ ಬಹಿರಂಗ ಪಡಿಸಿದರು. ಆರೂರು ಹೇಳಿದ ಬಳಿಕ ಅನಿರುದ್ಧ ಸಂಭಾವನೆ ಎಷ್ಟಿರಬಹುದು ಎನ್ನುವ ಕುತೂಹಲ ಹೆಚ್ಚಾಗಿತ್ತು. 

First Published Aug 24, 2022, 5:58 PM IST | Last Updated Aug 24, 2022, 5:58 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿ ಪ್ರೇಕ್ಷಕರ ಹೃದಯ ಗೆದ್ದಿತ್ತು. ಈ ಧಾರಾವಾಹಿಯ ಆರ್ಯವರ್ಧನ್ ಪಾತ್ರ ಕನ್ನಡಿಗರ ಮನೆಮಾತಾಗಿತ್ತು. ಆರ್ಯವರ್ಧನ್ ಆಗಿ ನಟ ಅನಿರುದ್ಧ ಕಾಣಿಸಿಕೊಂಡಿದ್ದರು. ಈ ಪಾತ್ರ ಅನಿರುದ್ಧ ಅವರಿಗೆ ದೊಡ್ಡ ಮಟ್ಟದ ಸಕ್ಸಸ್ ತಂದು ಕೊಟ್ಟಿತ್ತು. ಆದರೀಗ ಧಾರಾವಾಹಿ ತಂಡದ ಜೊತೆ ಕಿತ್ತಾಡಿಕೊಂಡು ಸೀರಿಯಲ್ ನಿಂದ ಕಿಕ್ ಔಟ್ ಆಗಿದ್ದಾರೆ. ಅಂದಹಾಗೆ ನಟ ಅನಿರುದ್ಧ್ ಕಿರುತೆರೆಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಅಂತೆ. ಹೀಗಂತ ಜೊತೆ ಜೊತೆಯಲಿ ಧಾರಾವಾಹಿ ನಿರ್ಮಾಪಕ ಅರೂರು ಜಗದೀಶ್ ಬಹಿರಂಗ ಪಡಿಸಿದರು. ಆರೂರು ಹೇಳಿದ ಬಳಿಕ ಅನಿರುದ್ಧ ಸಂಭಾವನೆ ಎಷ್ಟಿರಬಹುದು ಎನ್ನುವ ಕುತೂಹಲ ಹೆಚ್ಚಾಗಿತ್ತು. ಮೂಲಗಳ ಪ್ರಕಾರ ನಟ ಅನಿರುದ್ಧ್ ಒಂದು ದಿನಕ್ಕೆ 38 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರಂತೆ. ಆದರೀಗ ಅನಿರುದ್ಧ ಧಾರಾವಾಹಿಯಿಂದ ಹೊರಬಿದ್ದಿದ್ದಾರೆ. ಆರ್ಯವರ್ಧನ್ ಆಗಿ ಯಾರು ಎಂಟ್ರಿ ಕೊಡ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.