Asianet Suvarna News Asianet Suvarna News

ಕಿರುತೆರೆ ನಟಿಯ ಕಿರಿಕ್, ಅಪಘಾತ ಎಸಗಿ ಯುವತಿ ಮೇಲೆ ಹಲ್ಲೆ!

ಕನ್ನಡದ ಖ್ಯಾತ ಕಿರುತೆರೆ ನಟಿ ಲಕ್ಷ್ಮೀ ಸಿದ್ದಯ್ಯ  ಅಪಘಾತ ಎಸಗಿ ಬಳಿಕ ಯುವತಿ ಜೊತೆ ಕಿರಿಕ್ ಮಾಡಿಕೊಂಡಿದ್ದು ಈ ಘಟನೆ ಈಗ ವೈರಲ್ ಆಗಿದೆ.

ಬೆಂಗಳೂರು (ಮಾ.8): ಕನ್ನಡದ ಖ್ಯಾತ ಕಿರುತೆರೆ ನಟಿ ಅಪಘಾತ ಎಸಗಿ ಬಳಿಕ ಯುವತಿ ಜೊತೆ ಕಿರಿಕ್ ಮಾಡಿಕೊಂಡಿದ್ದು ಈ ಘಟನೆ ಈಗ ವೈರಲ್ ಆಗಿದೆ. ನಟಿಯ ಪುಂಡಾಟ ತಡವಾಗಿ  ಬೆಳಕಿಗೆ ಬಂದಿದ್ದು, ಆಕ್ಸಿಡೆಂಡ್ ಮಾಡಿ ಯುವತಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ನಟಿ ಹಾಗೂ ಅವರ ಸಹಚರನಿಂದ ಯುವತಿ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಡಿಸೆಂಬರ್ 6ರಂದು ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ಸಂಜೆ 5 ಗಂಟೆಗೆ ಈ ಘಟನೆ ನಡೆದಿದ್ದು, ಲಕ್ಷ್ಮಿ ಅವರು ಈ ವೇಳೆ ಮದ್ಯಪಾನ ಮಾಡಿದ್ದರು. ಪೊಲೀಸ್ ಠಾಣೆಗೆ ಹೋಗಿದ್ದೆವು. ಆದರೆ ಎಫ್‌ಐಆರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದರು. ಬಳಿಕ ನ್ಯಾಯಾಲಯದ ಮೊರೆ ಹೋದೆವು ಎಂದು ಯುವತಿಯ ಕಡೆಯವರು ತಿಳಿಸಿದ್ದಾರೆ.

Video Top Stories