BIG 3: ಅನೈತಿಕ ಚಟುವಟಿಕೆಗಳ ಅಡ್ಡೆಯಾದ ಹೈಟೆಕ್ ಜಿಮ್: ಸ್ಮಾರ್ಟ್ ಸಿಟಿ ಅನುದಾನ ನೀರಿನಲ್ಲಿ ಹೋಮ!
ಉದ್ಘಾಟನೆ ಭಾಗ್ಯವನ್ನೇ ಕಾಣದ ತುಮಕೂರಿನ ಹೈಟೆಕ್ ಜಿಮ್ ಅನೈತಿಕ ಚಟುವಟಿಕೆಗಳ ಅಡ್ಡೆಯಾಗಿದೆ. ಸ್ಮಾರ್ಟ್ ಸಿಟಿ ಅನುದಾನದಿಂದ ಈ ಜಿಮ್ ನಿರ್ಮಾಣವಾಗಿದೆ.
ತುಮಕೂರು ಜನತೆ ಫಿಟ್ ಆಗಿರಬೇಕು ಅನ್ನೋ ಉದ್ದೇಶದಿಂದ ಸ್ಮಾರ್ಟ್ ಸಿಟಿ ಅನುದಾನದಲ್ಲಿ ಹೈಟೆಕ್ ಜಿಮ್ ನಿರ್ಮಾಣವಾಗಿದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದಿದ್ರೆ ಇಲ್ಲಿವರೆಗೆ ಈ ಹೈಟೆಕ್ ಜಿಮ್ ಜನರ ಬಳಕೆಗೆ ಮುಕ್ತವಾಗಿ ರಬೇಕಿತ್ತು. ಆದ್ರೆ ಇದು ನಿರ್ಮಾಣವಾಗಿ ಒಂದೂವರೆ ವರ್ಷವಾಗಿದ್ರೂ ಉದ್ಘಾಟನೆ ಭಾಗ್ಯವನ್ನೇ ಕಾಣದ ಈ ಜಿಮ್ ಕಟ್ಟಡ, ಇದೀಗ ಅನೈತಿಕ ಚಟುವಟಿಕೆಗಳ ಅಡ್ಡವಾಗಿ ಬದಲಾಗಿದೆ. ತುಮಕೂರಿನ ಜೂನಿಯರ್ ಕಾಲೇಜು ಮೈದಾನ ಆವರಣದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಜಿಮ್ ನಿರ್ಮಾಣವಾಗಿದ್ದು, ಹೊಸ ,ಹೊಸ ಜಿಮ್ ಸಲಕರಣೆಗಳನ್ನ ಕೂಡ ತರಿಸಲಾಗಿದೆ. ಆದ್ರೆ, ಜಿಮ್ ನಿರ್ಮಾಣಗೊಂಡು ವರ್ಷವೇ ಕಳೆದರೂ ಇನ್ನೂ ಉದ್ಘಾಟನೆಯೇ ಆಗಿಲ್ಲ .ಹೀಗಾಗಿ ಲಕ್ಷಾಂತರ ಮೌಲ್ಯದ ಜಿಮ್ ಸಲಕರಣೆಗಳು ತುಕ್ಕು ಹಿಡಿಯುವಂತಾಗಿದ್ದು ಕಟ್ಟಡ ಕೂಡ ಪಾಳು ಬೀಳುವಂತೆ ಆಗಿದೆ.