ಸಹಜ ಹೆರಿಗೆಯಲ್ಲಿ ಒಂದಲ್ಲ ಎರಡಲ್ಲ ನಾಲ್ಕು ಕರುಗಳಿಗೆ ಜನ್ಮ ನೀಡಿದ ಹಸು..!

ಹಸುಗಳು ಎರಡು ಕರುಗಳಿಗೆ ಮೂರು ಕರುಗಳಿಗೆ ಜನ್ಮ ನೀಡಿರುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಕಡೆ ಹಸುವೊಂದು ಒಂದಲ್ಲ ಎರಡಲ್ಲ, ಬರೋಬ್ಬರಿ 4 ಕರುಗಳಿಗೆ ಜನ್ಮ ನೀಡಿದೆ.

First Published Jul 4, 2023, 11:38 AM IST | Last Updated Jul 4, 2023, 11:38 AM IST

ತುಮಕೂರು: ಹಸುಗಳು ಎರಡು ಕರುಗಳಿಗೆ ಮೂರು ಕರುಗಳಿಗೆ ಜನ್ಮ ನೀಡಿರುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಕಡೆ ಹಸುವೊಂದು ಒಂದಲ್ಲ ಎರಡಲ್ಲ, ಬರೋಬ್ಬರಿ 4 ಕರುಗಳಿಗೆ ಜನ್ಮ ನೀಡಿದೆ. ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ಚೇಳೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮುನಿಯಪ್ಪ ಎಂಬುವರಿಗೆ ಸೇರಿದ ರೈತರ ಹಸುವೊಂದು ನಾಲ್ಕು ಕರುಗಳಿಗೆ ಜನ್ಮ ನೀಡಿದ್ದು, ತಾಯಿ ಹಸು ಹಾಗೂ ನಾಲ್ಕೂ ಕರುಗಳು ಆರೋಗ್ಯವಾಗಿವೆ. ನಾಲ್ಕು ಕರುಗಳಲ್ಲಿ ಒಂದು ಹೆಣ್ಣು  ಹಾಗೂ ಮೂರು ಗಂಡು ಕರುಗಳಾಗಿವೆ. ನಿನ್ನೆ ಸಂಜೆ ಹಸು ಈ ನಾಲ್ಕು ಕರುಗಳಿಗೆ ಜನ್ಮ ನೀಡಿದೆ.  ಕರುಗಳ ಜನನದಿಂದ ರೈತ ಮುನಿಯಪ್ಪ ಮನೆಯಲ್ಲಿ ಸಂತಸ ನೆಲೆಯಾಗಿದೆ. 

Bagalakote: ಒಂದೇ ಬಾರಿಗೆ ನಾಲ್ಕು ಕರುಗಳಿಗೆ ಜನ್ಮ ನೀಡಿದ ಹಸು: ರೈತರಿಗೆ ಭಾರೀ ಅಚ್ಚರಿ

Video Top Stories