ಗೋಮಾಳ ಜಮೀನು ಗಲಾಟೆಗೆ 10 ರಾಸುಗಳು ಬಲಿ..!

ಗೋಮಾಳ ಜಮೀನು ವ್ಯಾಜ್ಯಕ್ಕೆ ಮೂಕ ಪ್ರಾಣಿಗಳು ಬಲಿಯಾಗಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆಯ ರೆಡ್ಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. 

First Published Jul 13, 2023, 11:18 AM IST | Last Updated Jul 13, 2023, 11:18 AM IST

ತುಮಕೂರು ಜಿಲ್ಲೆ ಕೊರಟಗೆರೆಯ ರೆಡ್ಡಿಹಳ್ಳಿ ಗ್ರಾಮದಲ್ಲಿ ಮೇವು ಹಾಗೂ ನೀರಿಲ್ಲದೇ ಗೋಶಾಲೆಯ 10 ರಾಸುಗಳ ಸಾವನಪ್ಪಿವೆ. ಗೋ ಶಾಲೆ ಟ್ರಸ್ಟ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಹಾಗೂ ರೈತನ ಮಧ್ಯೆ ಗೋ ಶಾಲೆಗೆ ದಾರಿ ಬಿಡುವ ವಿಚಾರಕ್ಕೆ ಜಟಾಪಟಿ ನಡೆದಿದೆ. ಗೋ ಶಾಲೆಗೆ ದಾರಿ ಇಲ್ಲವೆಂದು ಮೇವು ಹಾಗೂ ನೀರು ಪೂರೈಕೆ ಸ್ಥಗಿತಗೊಳಿಲಾಗಿದ್ದು, ಗೋಮಾಳದಲ್ಲಿ ಉಳುಮೆ ಮಾಡುತ್ತಿದ್ದು, ದಾರಿ ಬಿಡಲ್ಲ ಎಂದು ರೈತ ಪಟ್ಟು ಹಿಡಿದಿದ್ದಾನೆ. ಇದರಿಂದ ಮೇವು-ನೀರಿಲ್ಲದೇ ನರಳಾಡಿ ಗೋವುಗಳು ಪ್ರಾಣ ಬಿಟ್ಟಿವೆ.

Video Top Stories