Weekend Curfew: ನಂದಿ ಬೆಟ್ಟಕ್ಕೆ ಬಂದವರಿಗೆ ನಿರಾಸೆ, ನೋ ಎಂಟ್ರಿ

ಬೆಂಗಳೂರಿನ ಪ್ರವಾಸಿ ತಾಣ ನಂದಿಬೆಟ್ಟಕ್ಕೆ ಜನರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿತ್ತು. ಆದರೆ ಇದರಿಂದ ಜನರಿಂದ ಭಾರೀ ವಿರೋಧ ವ್ಯಕ್ತವಾಗಿದ್ದು ಮಾತ್ರವಲ್ಲದೆ ವ್ಯಾಪಾರಿಗಳಿಗೂ ಹೊಡೆತ ಬಿದ್ದಿತ್ತು

First Published Jan 23, 2022, 12:12 PM IST | Last Updated Jan 23, 2022, 12:12 PM IST

ಬೆಂಗಳೂರಿನ ಪ್ರವಾಸಿ ತಾಣ ನಂದಿಬೆಟ್ಟಕ್ಕೆ ಜನರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿತ್ತು. ಆದರೆ ಇದರಿಂದ ಜನರಿಂದ ಭಾರೀ ವಿರೋಧ ವ್ಯಕ್ತವಾಗಿದ್ದು ಮಾತ್ರವಲ್ಲದೆ ವ್ಯಾಪಾರಿಗಳಿಗೂ ಹೊಡೆತ ಬಿದ್ದಿತ್ತು. ಈ ನಿಟ್ಟಿನಲ್ಲಿ ವೀಕೆಂಡ್ ಕರ್ಫ್ಯೂ ತೆರವು ಮಾಡಲಾಗಿತ್ತು.  ಆದರೆ ಜನರು ಕರ್ಫ್ಯೂ ರದ್ದು ಮಾಡಿದ್ದೇ ತಡ ಪ್ರವಾಸಿ ತಾಣಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಜನರು ನಂದಿಬೆಟ್ಟಕ್ಕೆ ಬರುತ್ತಿದ್ದು ಪೊಲೀಸರು ಎಲ್ಲರನ್ನೂ ತಡೆದು ಹಿಂದಕ್ಕೆ ಕಳುಹಿಸುತ್ತಿದ್ದಾರೆ.

ಮತ್ತೆ ನಂದಿ ಬೆಟ್ಟ ಬಂದ್‌: ಹೊಸ ವರ್ಷಾಚರಣೆಗೆ ಬ್ರೇಕ್‌..!

ಚಿಕ್ಕಾಬಳ್ಳಾಪುರದಲ್ಲಿ ಮುಖ್ಯವಾಗಿ ನಂದಿಬೆಟ್ಟದಲ್ಲಿ ಕರ್ಫ್ಯೂ ಮುಂದುವರಿಸಲಾಗಿದೆ. ಒಮಿಕ್ರೋನ್, ಕೊರೋನಾ ಹೆಚ್ಚಳದಿಂದಾಗಿ ಜನರನ್ನು ನಿಯಂತ್ರಿಸಲ್ಪ ಕಷ್ಟಪಡುತ್ತಿದ್ದು ಎಲ್ಲರನ್ನೂ ಹಿಂದಕ್ಕೆ ಕಳುಹಿಸಲಾಗಿದೆ. ವೀಕೆಂಡ್ ಎಂಜಾಯ್ ಮಾಡಲೆಂದು ಬಂದವರೆಲ್ಲ ಈಗ ನಿರಾಸೆಯಿಂದ ಬೆಂಗಳೂರಿನತ್ತ ಹೊರಡುತ್ತಿದ್ದಾರೆ.