ಬಾ ಗುರು, ಮುಗಿಲೆತ್ತರದಲ್ಲಿ ಹಾರಾಡುತ್ತಾ ಕೊಡಗಿನ ಸೊಬಗನ್ನು ಆಸ್ವಾದಿಸೋಣ!

ಪ್ರಕೃತಿಯ ಸೊಬಗು, ಹಸಿರ ರಾಶಿ, ಗಿರಿ ಶಿಖರಗಳು ಅಂದಾಕ್ಷಣ ನೆನಪಾಗೋದು ಕರ್ನಾಟಕದ ಕಾಶಿ ,ಪುಟ್ಟ ಜಿಲ್ಲೆ ಕೊಡಗು. ಭೌಗೋಳಿಕ ವಿಸ್ತೀರ್ಣದಲ್ಲಿ ಚಿಕ್ಕ ಜಿಲ್ಲೆಯಾಗಿದ್ರು ತನ್ನ ಸೌಂದರ್ಯ ಸಿರಿಯ ಮೂಲಕ ಗಳಿಸಿರುವ ಖ್ಯಾತಿ ದೊಡ್ಡದು. 

First Published Jan 1, 2021, 1:17 PM IST | Last Updated Jan 1, 2021, 1:17 PM IST

ಕೊಡಗು (ಜ. 01):  ಪ್ರಕೃತಿಯ ಸೊಬಗು, ಹಸಿರ ರಾಶಿ, ಗಿರಿ ಶಿಖರಗಳು ಅಂದಾಕ್ಷಣ ನೆನಪಾಗೋದು ಕರ್ನಾಟಕದ ಕಾಶಿ ,ಪುಟ್ಟ ಜಿಲ್ಲೆ ಕೊಡಗು. ಭೌಗೋಳಿಕ ವಿಸ್ತೀರ್ಣದಲ್ಲಿ ಚಿಕ್ಕ ಜಿಲ್ಲೆಯಾಗಿದ್ರು ತನ್ನ ಸೌಂದರ್ಯ ಸಿರಿಯ ಮೂಲಕ ಗಳಿಸಿರುವ ಖ್ಯಾತಿ ದೊಡ್ಡದು. 

ಕೊಡಗಿನ ಸೊಬಗನ್ನ ನೋಡುತ್ತಿದ್ರೆ ನಮಗೆ ನಾವೇ ಕಳೆದೋಗ್ಬಿಡ್ತೇವೆ. ಅದರಲ್ಲೂ ಮಂಜು ಮುಸುಕುವ ಸಮಯವಂತೂ ಅದ್ಬುತ. ಇಂಥ ಕೊಡಗನ್ನ ಆಕಾಶದಿಂದ ನೋಡಿದ್ರೆ ಹೇಗಿರುತ್ತೆ? ವ್ಹಾವ್, ಅದ್ಭುತವಾಗಿರ್ಬೋದು ಅಂತ ಅಂದ್ಕೊಳ್ತಿದ್ದೀರಾ.?  ಇಮ್ಯಾಜಿನೇಷನ್ ಬಿಡಿ, ನಾವೇ ನಿಮಗೆ ಮುಗಿಲೆತ್ತರದಿಂದ ಕೊಡಗಿನ ಸೊಬಗನ್ನ ತೋರಿಸ್ತೇವೆ, ನೋಡಿ!