Asianet Suvarna News Asianet Suvarna News

ಕಲ್ಲು ತೂರಿದ್ರೆ ಕಾಸು, ಬೆಂಕಿ ಹಚ್ಚಿದ್ರೆ ಫುಡ್? ಮೆಕ್ಕಾದಿಂದ ಜಮೀರ್ ಹೇಳಿದ್ದೇನು?

ಜಮೀರ್​​ ಅಹ್ಮದ್​​​​ ಸುಮ್ಮನಿರೂ ಜಾಯಮಾನದವ್ರು ಅಲ್ಲವೇ ಇಲ್ಲ. ಸದಾ ಒಂದಿಲ್ಲೊಂದು ಸುದ್ದಿಯಲ್ಲಿ ಇದ್ದೇ ಇರ್ತಾರೆ. ಆದ್ರೆ ಯಾವಾಗ್ಲು ಬೇಡದ ಕೆಲ್ಸಕ್ಕೆ ಸುದ್ದಿಯಲ್ಲಿರ್ತಾರೆ. ಜಮೀರ್. ನಂತ್ರ ಯಾರ ಸಪೂರ್ಟ್​ ಸಿಗದೇ ಇದ್ದಾಗ, ಸಾರಿ ನಾನು ಹಾಗೆ ಮಾಡಬಾರ್ದಿತ್ತು ಅಂತ ಗೋಳಾಡ್ತಾರೆ. ಜಮೀರ್​ ಅಹ್ಮದ್​​ ಇಂದು ಅಂತದ್ದೇ ಮತ್ತೊಂದು ಬೇಡದ ವಿಚಾರಕ್ಕೆ ಸುದ್ದಿಯಾಗಿದ್ದಾರೆ
 

ಬೆಂಗಳೂರು (ಏ.30): ರಾಜ್ಯದಲ್ಲಿ ಪುಂಡರಿಗೆ ಯಾವುದೇ ಭಯವಿಲ್ಲ, ಗಲಭೆಕೋರರಿಗೆ ಯಾವುದೇ ಭಯವಿಲ್ಲ, ಅವ್ರಿಗೆಲ್ಲ ಯಾವಾಗ ಪುಂಡತನ ಮಾಡ್ಬೇಕು ಅನ್ಸುತ್ತೆ ಆಗ ಮಾಡಬಹುದು. ಯಾವಾಗ ಗಲಭೆ ಮಾಡಬೇಕು ಅನಿಸುತ್ತೋ ಯಾವುದೇ ಯೋಚನೆಗಳಿಲ್ಲದೆ ಮಾಡಬಹುದು. ಯಾಕೆಂದರೆ, ರಾಜ್ಯದಲ್ಲಿ ಅವರನ್ನ ಕಾಪಾಡೊಕ್ಕೆ ಒಬ್ಬ ಇದ್ದೇ ಇರ್ತಾನೆ. ಪುಂಡರು ಜೈಲಿಗೆ ಹೋದ್ರೂ ಆತ ಬೇಲ್​ ಕೊಡಿಸ್ತಾನೆ.. ಗಲಭೆಕೋರರು ಪೊಲೀಸ್​​ ಠಾಣೆಗೆ ಕಲ್ಲು ತೂರಿದ್ರೂ ಪರ್ವಾಗಿಲ್ಲ ಆತ ಕಲ್ಲು ಹೊಡೆದವರ ಬೇಕು, ಬೇಡಗಳನ್ನು ನೋಡ್ಕೊಳ್ತಾನೆ. 

ಬಾಡಿಗಾರ್ಡ್​​ ಜಮೀರ್​​ ಅಹ್ಮದ್​​ (Zameer Ahmed Khan) ಮತ್ತೆ ಪುಂಡರ ಪರ ನಿಂತಿದ್ದಾರೆ. ಗಲಭೆಕೋರರ ಬೆಂಬಲಕ್ಕೆ ನಿಂತಿದ್ದಾರೆ. ಹಳೇ ಹುಬ್ಬಳ್ಳಿಯಲ್ಲಿ (Old Hubballi) ಗಲಭೆ ಮಾಡಿ, ಪೊಲೀಸ್​ ಠಾಣೆಗೆ ಕಲ್ಲು ಹೊಡೆದು ಜೈಲು (Jail) ಸೇರಿರೋರು ಬೆಂಬಲ್ಲಕ್ಕೆ ಸದ್ದಿಲ್ಲದೆ ನಿಂತಿದ್ದಾರೆ ಜಮೀರ್​ ಅಹ್ಮದ್​​. 

ಹುಬ್ಬಳ್ಳಿ ಗಲಭೆಕೋರರಿಗೆ ಸಹಾಯ ಮಾಡಿ ವಿವಾದದ ಕಿಡಿ ಹೊತ್ತಿಸಿದ ಜಮೀರ್‌ ಅಹ್ಮದ್!

ಹನುಮ ಜಯಂತಿಯಂದು (Hanuma Jayanti) ಹುಬ್ಬಳ್ಳಿಯಲ್ಲಿ ಗಲಭೆ ನಡೆದಿದ್ದು ನಿಮಗೆಲ್ಲ ಗೊತ್ತೇ ಇದೆ. ಈ ಗಲಭೆಯಲ್ಲಿ ಪೊಲೀಸ್​​​ ಠಾಣೆ, ಆಂಜನೇಯ ದೇವಸ್ಥಾನ ಮತ್ತು ಹಿಂದೂಗಳ ಮನೆಗೆ ಕಲ್ಲು ಹೊಡೆದು ಗಲಾಟೆ ಮಾಡಿದ ಪರಿಣಾಮ, 156 ಜನ ಇಂದು ಬಳ್ಳಾರಿ ಮತ್ತು ಕಲಬುರ್ಗಿ ಜೈಲುಗಳಲ್ಲಿ ಇದ್ದಾರೆ. ಹುಬ್ಬಳ್ಳಿ ಗಲಭೆ ವಿಚಾರಕ್ಕೆ ಯಾರೆಲ್ಲ ಅರೆಸ್ಟ್​​ ಆಗಿದ್ದಾರೋ ಅವರೆಲ್ಲರ ಬೆಂಬಲಕ್ಕೆ ಚಾಮರಾಜಪೇಟೆ ಶಾಸಕ ಜಮೀರ್​ ಅಹ್ಮದ್​​ ನಿಂತಿದ್ದಾರೆ.  ಹುಬ್ಬಳ್ಳಿ ಗಲಭೆಯಲ್ಲಿ ಅರೆಸ್ಟ್​​ ಆಗಿರೋ 156 ಆರೋಪಿಗಳ ಮನೆಗೆ ಜಮೀರ್​ ಫುಡ್​ ಕಿಟ್​​ ಕಳುಹಿಸಿದ್ದಾರೆ. ಕೇವಲ ಭರ್ಜರಿ ದಿನಸಿ ತುಂಬಿರೋ ಫುಡ್​ ಕಿಟ್ಟ್ ಕೊಟ್ಟು ಅದರ ಜೊತೆ ಒಂದೊಂದು ಮನೆಗೆ ಐದು ಸಾವಿರ ರೂಪಾಯಿ ದುಡ್ಡು ಕೊಟ್ಟಿದ್ದಾರಂತೆ ಜಮೀರ್​ ಅಹ್ಮದ್​​.