Asianet Suvarna News Asianet Suvarna News

ಶಾಸಕ ಬೆಲ್ಲದ್‌ ಫೋನ್‌ ಕದ್ದಾಲಿಕೆ ಕೇಸ್, ಯುವರಾಜ ಸ್ವಾಮಿ ವಿಚಾರಣೆ ನಡೆಸಲು ತಯಾರಿ

Jun 20, 2021, 3:16 PM IST

ಬೆಂಗಳೂರು (ಜೂ. 20): ಪೋನ್‌ ಕದ್ದಾಲಿಕೆ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಅರವಿಂದ್‌ ಬೆಲ್ಲದ್‌  ಅವರಿಂದ ಕಬ್ಬನ್‌ ಪಾರ್ಕ್ ಉಪ ವಿಭಾಗದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 

ದಿಲ್ಲಿಯಲ್ಲಿ ಡಿಕೆ ಶಿವಕುಮಾರ್: ಕುತೂಹಲ ಮೂಡಿಸಿದ ದೆಹಲಿ ದಂಡಯಾತ್ರೆ

ತಮಗೆ ಯಾವಾಗಿನಿಂದ ಅಪರಿಚಿತ ಕರೆಗಳು ಬರುತ್ತಿವೆ, ಜೈಲಿನಿಂದ ಯುವರಾಜ ಸ್ವಾಮಿ ಹೆಸರಿನಲ್ಲಿ ಯಾವತ್ತು ಕರೆ ಬಂದಿತ್ತು ಹೀಗೆ ಕೆಲವು ವಿಚಾರಗಳ ಬಗ್ಗೆ ಶಾಸಕರಿಂದ ಎಸಿಪಿ ಯತಿರಾಜ್‌ ಮಾಹಿತಿ ಪಡೆದಿದ್ದಾರೆ. ಪೊಲೀಸರ ಕೆಲ ಪ್ರಶ್ನೆಗಳಿಗೆ ಅರವಿಂದ್‌ ಬೆಲ್ಲದ್‌ ಸೂಕ್ತ ಪುರಾವೆ ಒದಗಿಸಿಲ್ಲ ಎನ್ನಲಾಗಿದೆ. ಯುವರಾಜ್‌ನನ್ನು ಬಾಡಿ ವಾರೆಂಟ್ ಮೇಲೆ ಕರೆತರಲು ಸಿದ್ಧತೆ ನಡೆಸಲಾಗಿದೆ.