Asianet Suvarna News Asianet Suvarna News

ಯಲಹಂಕ ಮೇಲ್ಸೇತುವೆಗೆ 'ಸಾವರ್ಕರ್' ಹೆಸರು; ಹಿಂದೂಪರ ಸಂಘಟನೆಗಳಿಂದ ವಿವಾದದ ಕಿಡಿ

Jun 2, 2020, 3:22 PM IST

ಬೆಂಗಳೂರು (ಜೂ. 02): ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವ ವಿವಾದ ತಾರಕಕ್ಕೇರಿದೆ.  ಹಿಂದೂಪರ ಸಂಘಟನೆಗಳು ಫ್ಲೈ ಓವರ್ ಮೇಲೆ ಸಾವರ್ಕರ್ ಫೋಟೋ ಇಟ್ಟು ಪೂಜೆ ಮಾಡಿ ಸಾವರ್ಕರ್ ಮೇಲ್ಸೇತುವೆ ಎಂದು ಘೋಷಿಸಿದೆ. 


ಯಲಹಂಕ ಫ್ಲೈ ಓವರ್‌ಗೆ ಸಾವರ್ಕರ್ ಹೆಸರಿಡುವ ವಿವಾದ ಕಾವೇರುತ್ತಿದ್ದಂತೆ ಸರ್ಕಾರ ಉದ್ಘಾಟನಾ ಸಮಾರಂಭವನ್ನು ಮುಂದೂಡಿತ್ತು.  ಇದೀಗ ಹಿಂದೂಪರ ಸಂಘಟನೆಗಳು ಏಕಾಏಕಿ ಸಾವರ್ಕರ್ ಮೇಲ್ಸೇತುವೆ ಎಂದು ಘೋಷಿಸಿದೆ. ನೂರಾರು ಹಿಂದೂಪರ ಸಂಘಟನೆಗಳು ಮೊಕ್ಕಾಂ ಹೂಡಿವೆ.