Yadagir: ಟವೆಲ್ ಸುತ್ತಿಕೊಂಡಿದ್ದಕ್ಕೆ ಮಾಸ್ಕ್ ಹಾಕಿಲ್ಲವೆಂದು ದಂಡ, ಜನಸಾಮಾನ್ಯರಿಗೆ ಮಾತ್ರ ರೂಲ್ಸ್!

ಕೊರೊನಾ ನಿಯಮಗಳು (Corona Rules) ಜನಸಾಮಾನ್ಯರಿಗೆ ಮಾತ್ರ, ಜನಪ್ರತಿನಿಧಿಗಳಿಗೆ ಇಲ್ಲ ಎಂಬಂತಾಗಿದೆ. ರಾಜಕಾರಣಿಗಳು ಹುಟ್ಟುಹಬ್ಬ ಆಚರಿಸಿಕೊಂಡರೂ ಕೇಳೋದಿಲ್ಲ ಆದರೆ ಜನ ಸಾಮಾನ್ಯರು ಮಾಸ್ಕ್ (Mask) ಹಾಕದಿದ್ರೆ ಫೈನ್ ಹಾಕ್ತಾರೆ. 

First Published Jan 17, 2022, 12:30 PM IST | Last Updated Jan 17, 2022, 1:00 PM IST

ಯಾದಗಿರಿ (ಜ. 17): ಕೊರೊನಾ ನಿಯಮಗಳು (Corona Rules) ಜನಸಾಮಾನ್ಯರಿಗೆ ಮಾತ್ರ, ಜನಪ್ರತಿನಿಧಿಗಳಿಗೆ ಇಲ್ಲ ಎಂಬಂತಾಗಿದೆ. ರಾಜಕಾರಣಿಗಳು ಹುಟ್ಟುಹಬ್ಬ ಆಚರಿಸಿಕೊಂಡರೂ ಕೇಳೋದಿಲ್ಲ ಆದರೆ ಜನ ಸಾಮಾನ್ಯರು ಮಾಸ್ಕ್ (Mask) ಹಾಕದಿದ್ರೆ ಫೈನ್ ಹಾಕ್ತಾರೆ. 

Covid 19: ಸೋಂಕು ನಿಯಂತ್ರಣಕ್ಕೆ ಬಿಗಿ ಕ್ರಮ.? ಇಂದು ಸಿಎಂ ಮಹತ್ವದ ಸಭೆ

ಯಾದಗಿರಿಯಲ್ಲಿ (Yadagir) ಮುಖಕ್ಕೆ ಟವೆಲ್ ಸುತ್ತಿಕೊಂಡಿದ್ದಕ್ಕೆ, ಮಾಸ್ಕ್ ಇಲ್ಲ ಎಂದು ಫೈನ್ ಹಾಕಿದ್ದಾರೆ. ಶಲ್ಯಾ ಕಟ್ಟಿಕೊಂಡಿನ್ರೀ, ಮತ್ತೆ ಮಾಸ್ಕ್ ಯಾಕ್ರಿ.? ಎಂದು ಕೇಳಿದರೆ ಮಾಸ್ಕ್ ಹಾಕಿಕೋ ಇಲ್ಲ ದಂಡ ಕಟ್ಟು, ಬಸ್‌ನಿಂದ ಇಳಿ ಎಂದು ಪೊಲೀಸರು ಹೆದರಿಸಿದ್ದಾರೆ.