Asianet Suvarna News Asianet Suvarna News

'ನಾನು ಸಚಿವ ಸ್ಥಾನಕ್ಕೆ ಲಾಬಿ ಮಾಡಲ್ಲ, ಮಾಡುವುದಿದ್ದರೆ ದೆಹಲಿಗೆ ಹೋಗಿ ಕೂರುತ್ತಿದ್ದೆ'

Aug 2, 2021, 10:32 AM IST

ದಾವಣಗೆರೆ (ಆ. 02):  'ನಾನು ಸಚಿವ ಸ್ಥಾನಕ್ಕೆ ಲಾಬಿ ಮಾಡಲ್ಲ, ಲಾಬಿ ಮಾಡುವುದಿದ್ದರೆ ದೆಹಲಿಗೆ ಹೋಗಿ ಕೂರುತ್ತಿದ್ದೆ' ಎಂದು  ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡುತ್ತಾ ಹೇಳಿದ್ದಾರೆ. 

ಸಿಎಂಗೆ 'ಸಂಪುಟ' ಸಂದೇಶ, ಪಟ್ಟಿ ಫೈನಲ್ ಆದ್ರೆ ಆಗಸ್ಟ್ 5 ರಂದು ಪ್ರಮಾಣ ವಚನ..?

'ನಾನು ದೆಹಲಿಗೆ ಹೋಗಲ್ಲ,  ಹಳ್ಳಿ ಕಡೆ ಮುಖ ಮಾಡಿ ಕ್ಷೇತ್ರದ ಜನತೆ ಕಷ್ಟ ಆಲಿಸುತ್ತಿದ್ದೇನೆ. ನಮ್ಮ ಜಿಲ್ಲೆಯ ಐದು ಜನ ಶಾಸಕರು ನಮ್ಮ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದೇವೆ. ನಮ್ಮ ಪಕ್ಷದ ವರಿಷ್ಠರು ಗುರುತಿಸಿ ಅವಕಾಶ ಕೊಟ್ಟರೆ ಸಚಿವನಾಗುತ್ತೇನೆ. ಸಚಿವ ಸ್ಥಾನ ಕೊಡುವುದು ಮುಖ್ಯಮಂತ್ರಿಗಳ ಪರಮಾಧಿಕಾರ' ಎಂದು ರೇಣುಕಾಚಾರ್ಯ ಹೇಳಿದ್ದಾರೆ.