Asianet Suvarna News Asianet Suvarna News

ವನ್ಯಜೀವಿ ಸಂರಕ್ಷಣಾ ಅಭಿಯಾನ: ನಾಗರಹೊಳೆ ರಾಜೀವ್‌ ಗಾಂಧಿ ಹುಲಿಸಂರಕ್ಷಿತ ಪ್ರದೇಶ ರೌಂಡ್ಸ್‌

ನಾಗರಹೊಳೆ ರಾಜೀವ್‌ ಗಾಂಧಿ ಹುಲಿಸಂರಕ್ಷಿತ ಪ್ರದೇಶ ಕೊಡಗು ಮತ್ತು ಮೈಸೂರು ಜಿಲ್ಲೆಗಳ ಮಧ್ಯೆ ಸುಮಾರು 843 ಚದರ ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ  ಹಬ್ಬಿರುವ ಈ ಅರಣ್ಯ ಎಲೆ ಹುದುರುವ ಕಾಡುನಿಂದ ಹಿಡಿದು ಅರೆನಿತ್ಯ ಹರಿದ್ವರ್ಣದ ಸಸ್ಯ ವೈವಿಧ್ಯವನ್ನು ಹೊಂದಿದೆ. 

First Published Jun 18, 2023, 8:24 PM IST | Last Updated Jun 18, 2023, 8:24 PM IST

ನಾಗರಹೊಳೆ ರಾಜೀವ್‌ ಗಾಂಧಿ ಹುಲಿಸಂರಕ್ಷಿತ ಪ್ರದೇಶ ಕೊಡಗು ಮತ್ತು ಮೈಸೂರು ಜಿಲ್ಲೆಗಳ ಮಧ್ಯೆ ಸುಮಾರು 843 ಚದರ ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ  ಹಬ್ಬಿರುವ ಈ ಅರಣ್ಯ ಎಲೆ ಹುದುರುವ ಕಾಡುನಿಂದ ಹಿಡಿದು ಅರೆನಿತ್ಯ ಹರಿದ್ವರ್ಣದ ಸಸ್ಯ ವೈವಿಧ್ಯವನ್ನು ಹೊಂದಿದೆ. ಈ ಆಭಯಾರಣ್ಯ ವಿಶಿಷ್ಠ ಪಕ್ಷಿ ಸಂಕುಲದ ಜೊತೆ ಇದೆ. ಆನೆ, ಹುಲಿ, ಚಿರತೆ, ಕಾಡುಕೋಣ, ಕೆನ್ನಾಯಿ, ಕಡವೆಗಳಂತಹ ಪರಭಕ್ಷ ಪ್ರಾಣಿಗಳ ಸಂಕುಲಿತ ವೈವಿಧ್ಯವನ್ನು ಹೊಂದಿದ್ದು, ಅಪರೂಪದ ಕಪ್ಪು ಚಿರತೆಯ ಕಾರಣದಿಂದಲೂ ಜಗತ್ಪ್ರಸಿದ್ದವಾಗಿದೆ. ಇಂತಹ ಅನನ್ಯ ಜೀವ ಸಂಕುಲಗಳನನ್ಉ ಪೋಷಿಸುತ್ತಿರುವ ಹುಲಿ ಸಂರಕ್ಷಿತ ಪ್ರದೇಶ ಇಂದಿಗೂ ತನ್ನ  ಒಡಲಲ್ಲಿ ಆದಿವಾಸಿಗಳಿಗೂ ಆಶ್ರಯವನ್ನು ನೀಡುತ್ತಾ ಬಂದಿದೆ. ಏಷ್ಯಾನೆಟ್‌ ಸುವರ್ಣನ್ಯೂಸ್‌- ಕನ್ನಡಪ್ರಭ ವತಿಯಿಂದ ನಡೆಯುತ್ತಿರುವ ವನ್ಯಜೀವಿ ಸಂರಕ್ಷಣಾ ಅಭಿಯಾನದ ಅಂಗವಾಗಿ  ನಾಗರಹೊಳೆ ರಾಜೀವ್‌ ಗಾಂಧಿ ಹುಲಿಸಂರಕ್ಷಿತ ಪ್ರದೇಶಕ್ಕೆ ಭೇಟಿ ಕೊಟ್ಟಾಗ ಕಂಡು ಬಂದ ವಿಚಾರಗಳಿವು. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

Video Top Stories