Asianet Suvarna News Asianet Suvarna News

ರೈತರಿಗೆ ಅನ್ಯಾಯ ಆದ್ರೆ ಜೆಡಿಎಸ್ ಒಂದು ಕ್ಷಣ ಕೂಡಾ ಸಹಿಸಲ್ಲ: ಶರವಣ

ರೈತರ ಪ್ರತಿಭಟನೆ ರಾಜಕಿಯ ವಾಕ್ಸಮರಕ್ಕೆ ಕಾರಣವಾಗಿದೆ. ಎಚ್‌ಡಿಕೆ- ಕೋಡಿಹಳ್ಳಿ ಚಂದ್ರಶೇಖರ್ ನಡುವೆ ಮಾತಿನ ಯುದ್ಧ ನಡೆದಿದೆ. 
 

First Published Dec 9, 2020, 4:16 PM IST | Last Updated Dec 9, 2020, 4:21 PM IST

ಬೆಂಗಳೂರು (ಡಿ. 09): ರೈತರ ಪ್ರತಿಭಟನೆ ರಾಜಕಿಯ ವಾಕ್ಸಮರಕ್ಕೆ ಕಾರಣವಾಗಿದೆ. ಎಚ್‌ಡಿಕೆ- ಕೋಡಿಹಳ್ಳಿ ಚಂದ್ರಶೇಖರ್ ನಡುವೆ ಮಾತಿನ ಯುದ್ಧ ನಡೆದಿದೆ. 

ಕುಮಾರಸ್ವಾಮಿ ರೈತರ ಹೆಸರು ಹೇಳಿಕೊಂಡು, ಮಣ್ಣಿನ ಮಗನ ಹೆಸರು ಹೇಳಿಕೊಂಡು ಅಧಿಕಾರ ಅನುಭವಿಸಿದ್ದಾರೆ. ಕುಮಾರಸ್ವಾಮಿ ಮಾಡಿರುವ ಅಪರಾಧವನ್ನು ಈ ಮಣ್ಣು ಒಪ್ಪುವುದಿಲ್ಲ. ರೈತರ ಬಾಯಿಗೆ ಮಣ್ಣು ಹಾಕಿದ್ದೀರಿ. ನಿಮ್ಮನ್ನು ನಾವು ಕ್ಷಮಿಸೋದಿಲ್ಲ' ಎಂದು ಚಂದ್ರಶೇಖರ್ ವಾಗ್ದಾಳಿ ನಡೆಸಿದ್ಧಾರೆ. 

ಜೆಡಿಎಸ್ ದ್ವಂದ್ವ ನೀತಿ ಬಗ್ಗೆ ಜೆಡಿಎಸ್ ಮುಖಂಡ ಶರವಣ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 'ನಾವು ಕೂಡಾ ಈ ಕಾಯ್ದೆಯನ್ನು ವಿರೋಧಿಸುತ್ತೇವೆ. ಇದು ರೈತರ ಹೊಟ್ಟೆ ಮೇಲೆ ಹೊಡೆಯುವ ಕಾಯ್ದೆ. ರೈತರಿಗೆ ಅನ್ಯಾಯ ಆದ್ರೆ ಜೆಡಿಎಸ್ ಒಂದು ಕ್ಷಣ ಕೂಡಾ ಸಹಿಸಲ್ಲ' ಎಂದು ಹೇಳಿದರು. 

Video Top Stories