Asianet Suvarna News Asianet Suvarna News

ದರ್ಶನ್ ಹಲ್ಲೆ ಪ್ರಕರಣ ಎಲ್ಲೆಲ್ಲೋ ಸುತ್ತಿಕೊಂಡು ದೊಡ್ಮನೆ ಕಡೆ ತಿರುಗಿದ್ದೇಕೆ..?

‘ಇಂದ್ರಜಿತ್‌ ಲಂಕೇಶ್‌ ಬಳಿ ನನ್ನದೊಂದು ಆಡಿಯೋ ಇದೆ. ಅವನು ಗಂಡಸೇ ಆಗಿದ್ದರೆ ಅದನ್ನು ಬಿಡುಗಡೆ ಮಾಡಲಿ’ ಎಂದು ನಟ ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ತೂಗುದೀಪ ಸವಾಲು ಹಾಕಿದ್ದಾರೆ.

ಬೆಂಗಳೂರು (ಜು. 18): 25 ಕೋಟಿ ಬ್ಯಾಂಕ್‌ ಸಾಲ ವಿವಾದದ ಬಿಸಿ ಆರುವ ಮುನ್ನವೇ ಬೆಂಗಳೂರಿನಲ್ಲಿ ವರನಟ ಡಾ.ರಾಜ್‌ ಕುಮಾರ್‌ ಕುಟುಂಬಕ್ಕೆ ಸೇರಿದ ಆಸ್ತಿ ಖರೀದಿ ವಿಚಾರವಾಗಿ ನಟ ದರ್ಶನ್‌ ಹಾಗೂ ಚಲನಚಿತ್ರ ನಿರ್ಮಾಪಕ ಉಮಾಪತಿ ಮಧ್ಯೆ ಜಟಾಪಟಿ ನಡೆದಿದೆ.  ‘ನನಗೆ ಸ್ವಇಚ್ಛೆಯಿಂದ ಉಮಾಪತಿ ಆಸ್ತಿ ಮಾರಾಟಕ್ಕೆ ಒಪ್ಪಿದ್ದರು. ಮೂರು ವರ್ಷಗಳಿಂದ ಆ ಕಟ್ಟಡದ ಬಾಡಿಗೆ ಹಣವನ್ನು ಅವರು ನನಗೆ ಕೊಡುತ್ತಿದ್ದಾರೆ. ಮಾರಾಟ ಮಾಡಿಲ್ಲ ಅಂದರೆ ಬಾಡಿಗೆ ಹಣ ಯಾಕೆ ಕೊಡುತ್ತಿದ್ದರು’ ಎಂದು ದರ್ಶನ್ ಪ್ರಶ್ನಿಸಿದ್ಧಾರೆ. 

ಇನ್ನೊಂದು ಕಡೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ‘ಇಂದ್ರಜಿತ್‌ ಲಂಕೇಶ್‌ ಬಳಿ ನನ್ನದೊಂದು ಆಡಿಯೋ ಇದೆ. ಅವನು ಗಂಡಸೇ ಆಗಿದ್ದರೆ ಅದನ್ನು ಬಿಡುಗಡೆ ಮಾಡಲಿ’ ಎಂದು ನಟ ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ತೂಗುದೀಪ ಸವಾಲು ಹಾಕಿದ್ದಾರೆ. ಈ ಪ್ರಕರಣ ಎಲ್ಲೆಲ್ಲೋ ಸುತ್ತಿಕೊಂಡು ದೊಡ್ಮನೆ ಕಡೆ ತಿರುಗಿದ್ದೇಕೆ..? 

Video Top Stories