Asianet Suvarna News Asianet Suvarna News

Weekend Curfew: ಭಾನುವಾರದ ವೀಕೆಂಡ್ ಕರ್ಫ್ಯೂಗೆ ಹೇಗಿದೆ ರೆಸ್ಪಾನ್ಸ್..?

ಕೊರೋನಾ ನಿಯಂತ್ರಣ (Covid Control) ಸಂಬಂಧ ಜಾರಿ ಮಾಡಿರುವ ವೀಕೆಂಡ್‌ ಕರ್ಫ್ಯೂ (Weekend Curfew) ಎರಡನೇ ವಾರದ ಮೊದಲ ದಿನವಾದ ಶನಿವಾರ ರಾಜಧಾನಿಯಲ್ಲಿ ಬಹುತೇಕ ಯಶಸ್ವಿಯಾಯಿತು.

ಬೆಂಗಳೂರು (ಜ. 16): ಕೊರೋನಾ ನಿಯಂತ್ರಣ (Covid Control) ಸಂಬಂಧ ಜಾರಿ ಮಾಡಿರುವ ವೀಕೆಂಡ್‌ ಕರ್ಫ್ಯೂ (Weekend Curfew) ಎರಡನೇ ವಾರದ ಮೊದಲ ದಿನವಾದ ಶನಿವಾರ ರಾಜಧಾನಿಯಲ್ಲಿ ಬಹುತೇಕ ಯಶಸ್ವಿಯಾಯಿತು.

ಪ್ರತಿ ನಿತ್ಯ ಲಕ್ಷಾಂತರ ಪ್ರಯಾಣಿಕರು ಓಡಾಡುವ ಮೆಜೆಸ್ಟಿಕ್‌ ಪ್ರದೇಶ ಶನಿವಾರ ಪ್ರಯಾಣಿಕರು ಇಲ್ಲದೇ ಬಿಕೋ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿನ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆಗಿಂತ ಬಸ್‌ಗಳ ಸಂಖ್ಯೆಯೇ ಹೆಚ್ಚಿತ್ತು.  ಇನ್ನು ನೆರೆ ರಾಜ್ಯದ ಪ್ರಯಾಣಿಕರಿಗೆ RTPCR ವರದಿ ಇದ್ರೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಅನಗತ್ಯವಾಗಿ ಓಡಾಟ ನಡೆಸಿದರೆ ವಾಹನಗಳು ಸೀಜ್ ಆಗಲಿದೆ.