ವಿರೂಪಾಕ್ಷಪ್ಪ ಮೆರವಣಿಗೆ: ಸುವರ್ಣ ನ್ಯೂಸ್ ಕ್ಯಾಮೆರಾಮನ್ ಮತ್ತು ರಿಪೋರ್ಟರ್ ಮೇಲೆ ಹಲ್ಲೆಗೆ ಯತ್ನ

ಅಕ್ರಮ ಹಣ ಸಂಪಾದನೆಯ ಆರೋಪಿ ಶಾಸಕ ವಿರುಪಾಕ್ಷಪ್ಪ ಮಾಡಾಳ್‌ 6 ದಿನ ತಲೆಮರೆಸಿಕೊಂಡು, ಜಾಮೀನು ಪಡೆದುಕೊಂಡು ಅದ್ಧೂರಿ ಮೆರವಣಿಗೆ ಮಾಡಿಸಿಕೊಂಡಿದ್ದನ್ನು ವಿರೋಧಿಸಿ ಪ್ರಸಾರ ಮಾಡಿದ ಸುವರ್ಣ ನ್ಯೂಸ್‌ ವರದಿಗಾರರು ಮತ್ತು ಕ್ಯಾಮರಾಮ್ಯಾನ್‌ ಮೇಲೆ ಹಲ್ಲೆ ಯತ್ನ ನಡೆದಿದೆ.

First Published Mar 7, 2023, 6:23 PM IST | Last Updated Mar 7, 2023, 6:23 PM IST

ದಾವಣಗೆರೆ (ಮಾ.07): ಲೋಕಾಯುಕ್ತ ಪೊಲೀಸರಿಂದ ತಪ್ಪಿಸಿಕೊಂಡು 6 ದಿನಗಳ ಕಾಲ ಅವಿತು ಕುಳಿತಿದ್ದ ಕೆಎಸ್‌ಡಿಎಲ್‌ ಅಧ್ಯಕ್ಷ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ತನಗೆ 74 ವರ್ಷವಾಗಿದ್ದು, ಹೃದಯ ಸಂಬಂಧಿ ಕಾಯಿಲೆಯಿದೆ ಎಂದು ಜಾಮೀನು ನೀಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಮಾನವೀಯತೆ ಹಿನ್ನೆಲೆಯಲ್ಲಿ ಕೋರ್ಟ್‌ ಕೂಡ ಜಾಮೀನು ಮಂಜೂರು ಮಾಡಿದ್ದು, ಕೆಲವೇ ಗಂಟೆಗಳಲ್ಲಿ ಶಾಸಕ ವಿರುಪಾಕ್ಷಪ್ಪ ಅದ್ಧೂರಿ ಮೆರವಣಿಗೆ ಮೂಲಕ ಮನೆಗೆ ಆಗಮಿಸಿದ್ದಾರೆ. ಮೆರವಣಿಗೆ ವೇಳೆಗೆ ಅನಾರೋಗ್ಯ ಸರಿ ಹೋಗಿತ್ತೇ.? ಇದೇನಾ ಪ್ರಜಾಪ್ರಭುತ್ವದ ಮಾದರಿ ರಾಜಕಾರಣ? ಬಿಜೆಪಿಗೆ ಮುಜುಗರ ಆಗುವುದಿಲ್ಲವೇ ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವರದಿ ಮಾಡಿತ್ತು. ಆದರೆ, ದೃಶ್ಯ ಪ್ರಸಾರ ಮಾಡುತ್ತಿದ್ದಂತೆಯೇ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವರದಿಗಾರ ವರದರಾಜ್‌ ಹಾಗೂ ಕ್ಯಾಮರಾಮೆನ್‌ ಮೇಲೆ ಶಾಸಕರ ಬೆಂಬಲಿಗರು ಹಾಗೂ ಅಭಿಮಾನಿಗಳು ಹಲ್ಲೆ ಮಾಡಲು ಯತ್ನ ಮಾಡಿದ್ದಾರೆ.

ಮನೆಯಲ್ಲಿ ಕಂತೆ ಕಂತೆ ನೋಟು ಇಟ್ಟುಕೊಂಡು ಅಕ್ರಮ ಹಣ ಸಂಪಾದನೆಯಲ್ಲಿ ಎ1 ಆರೋಪಿ ಆಗಿರುವ KSDL ಅಧ್ಯಕ್ಷ ವಿರುಪಾಕ್ಷಪ್ಪ ಮಾಡಾಳ್‌ಗೆ ಮಾಡುತ್ತಿದ್ದ ಅದ್ಧೂರಿ ಮೆರವಣಿಗೆಯನ್ನು ವಿರೋಧಿಸಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಕ್ಯಾಮೆರಾಗಳನ್ನು ಕಿತ್ತುಕೊಂಡು ಹಲ್ಲೆ ಮಾಡಲು ಮುಂದಾಗಿದ್ದು, ರಾಜ್ಯಾದ್ಯಂತ ಇದಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ.