ಬಿಜೆಪಿ ಕಾರ್ಯಕಾರಿಣಿಗೆ ಬಿಸಿ ಮುಟ್ಟಿಸಲು ಕಾಂಗ್ರೆಸ್‌ ಮಾಸ್ಟರ್ ಪ್ಲ್ಯಾನ್!

ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಇಂದಿನಿಂದ(ಶನಿವಾರ) ಬಿಜೆಪಿ ಹೈವೋಲ್ಟೇಜ್‌ ಕಾರ್ಯಕಾರಣಿ ನಡೆಯಲಿದೆ. ಹೊಸಪೇಟೆಯಲ್ಲಿ ಎರಡು ದಿನ ಮಹತ್ವದ ಬೈಠಕ್‌ ನಡೆಯಲಿದೆ. ಇದರ ನಡುವೆ ಬಿಜೆಪಿ ಕಾರ್ಯಕಾರಿಣಿಗೆ ಬಿಸಿ ಮುಟ್ಟಿಸಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ನಡೆಸಿದೆ.

First Published Apr 16, 2022, 11:14 AM IST | Last Updated Apr 16, 2022, 11:14 AM IST

ವಿಜಯನಗರ (ಏ.16): ಭಾರತೀಯ ಜನತಾ ಪಕ್ಷದ (BJP) ಎರಡು ದಿನಗಳ ಹೈವೋಲ್ಟೇಜ್ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆ ಇಂದಿನಿಂದ ಹೊಸಪೇಟೆಯಲ್ಲಿ (Hospet) ಆರಂಭವಾಗಿದೆ. ಇದರ ಬೆನ್ನಲ್ಲಿಯೇ ಬಿಜೆಪಿ ಕಾರ್ಯಕಾರಿಣಿಗೆ ಬಿಸಿ ಮುಟ್ಟಿಸಲು ರಾಜ್ಯದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ (Congress) ಮಾಸ್ಟರ್ ಪ್ಲ್ಯಾನ್ ರೆಡಿ ಮಾಡಿದೆ.

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರದಲ್ಲಿ ಈಗಾಗಲೇ ರಾಜೀನಾಮೆ ನೀಡಿರುವ ಸಚಿವ ಈಶ್ವರಪ್ಪ ಅವರನ್ನು ಬಂಧನ ಮಾಡುವಂತೆ ಹೊಸಪೇಟೆಯಲ್ಲಿ ಎಚ್ ಕೆ ಪಾಟೀಲ್ (HK Patil) ನೇತೃತ್ವದಲ್ಲಿ ಬಿಜೆಪಿ ಕಾರ್ಯಕಾರಿಣಿಯ ಎದುರೇ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಮುಂದಾಗಿದೆ. ಬಳ್ಳಾರಿ ಹಾಗೂ ವಿಜಯನಗರ ಭಾಗದ ನಾಯಕರು ಹಲವು ನಾಯಕರು ಭಾಗಿಯಾಗಲಿದ್ದು, ಶಾಸಕ ತುಕಾರಾಂ ಸೇರಿದಂತೆ ಹಲವು ನಾಯಕರು ಪ್ರತಿಭಟನೆಯಲ್ಲಿ ಇರಲಿದ್ದಾರೆ ಎನ್ನಲಾಗಿದೆ.

ಹೊಸಪೇಟೆಯಲ್ಲಿ ಬಿಜೆಪಿ ಕಾರ್ಯಕಾರಿಣಿ: ಸಂಪುಟ, ಚುನಾವಣೆ ಬಗ್ಗೆ ಹೈವೋಲ್ಟೇಜ್ ಚರ್ಚೆ

2 ದಿಗಳ ಮಹತ್ವದ ಬೈಠಕ್ ಗೆ ಬಿಜೆಪಿಯ ರಾಷ್ಟ್ರಮಟ್ಟದ ನಾಯಕರು ಭಾಗಿಯಾಗಲಿದ್ದಾರೆ. ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ (JP Nadda), ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ (Arun Singh) ಇರಲಿರುವ ಈ ಸಭೆಗೆ ಈಶ್ವರಪ್ಪ ಗೈರು ಹಾಜರಾಗಲಿದ್ದಾರೆ. ಮೊಮ್ಮಗನ ಮದುವೆಯ ಕಾರಣಕ್ಕೆ ಸಭೆಗೆ ಆಗಮಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಇದರ ನಡುವೆ ಜೆಪಿ ನಡ್ಡಾಗೆ ಮುಜುಗರ ತರಲು ಕೈ ಆದಷ್ಟು ಸರ್ಕಸ್ ಮಾಡಲಿದೆ.

Video Top Stories