Asianet Suvarna News Asianet Suvarna News

ವಿಧಾನಸೌಧಕ್ಕೂ ಕೊರೋನಾ ಅಟ್ಯಾಕ್..!

ಶಕ್ತಿಸೌಧ ವಿಧಾನಸೌಧ ಸಿಬ್ಬಂದಿಗಳಲ್ಲಿ ಕೊರೋನಾ ಹೆಚ್ಚಾಗಿ ಕಾಣಿಸಿಕೊಳ್ಳಲಾರಂಭಿಸಿದೆ. ಹೀಗಾಗಿ ಬೆಳಗ್ಗೆಯಿಂದಲೇ ಪ್ರತಿ ಕೊಠಡಿಯನ್ನು ಸಿಬ್ಬಂದಿಗಳು ಸ್ಯಾನಿಟೈಸಿಂಗ್ ಮಾಡುವ ಮೂಲಕ ಶುಚಿಗೊಳಿಸುತ್ತಿದ್ದಾರೆ. 

ಬೆಂಗಳೂರು(ಜು.06): ರಾಜ್ಯದ ಶಕ್ತಿಸೌಧ, ವಿಧಾನಸೌಧಕ್ಕೂ ಕೊರೋನಾ ಸೋಂಕು ವಕ್ಕರಿಸಿದೆ. ವಿಧಾನಸೌಧದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಲ್ಲಿ ದಿನೇ ದಿನೇ ಸೋಂಕು ಕಾಣಿಸಿಕೊಳ್ಳಲಾರಂಭಿಸಿದೆ. ಹೀಗಾಗಿ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ವಿಧಾನಸೌಧಕ್ಕೆ ಸ್ಯಾನಿಟೈಸಿಂಗ್ ಮಾಡಲಾಗಿದೆ.

ಹೌದು, ಶಕ್ತಿಸೌಧ ವಿಧಾನಸೌಧ ಸಿಬ್ಬಂದಿಗಳಲ್ಲಿ ಕೊರೋನಾ ಹೆಚ್ಚಾಗಿ ಕಾಣಿಸಿಕೊಳ್ಳಲಾರಂಭಿಸಿದೆ. ಹೀಗಾಗಿ ಬೆಳಗ್ಗೆಯಿಂದಲೇ ಪ್ರತಿ ಕೊಠಡಿಯನ್ನು ಸಿಬ್ಬಂದಿಗಳು ಸ್ಯಾನಿಟೈಸಿಂಗ್ ಮಾಡುವ ಮೂಲಕ ಶುಚಿಗೊಳಿಸುತ್ತಿದ್ದಾರೆ. 

ಆಸ್ಪತ್ರೆಗಳ ಅಮಾನವೀಯತೆಗೆ ಕೊನೆಯೇ ಇಲ್ವಾ?

ಇದೀಗ ಮಧ್ಯಾಹ್ನ 12 ಗಂಟೆಗೆ ಹಾಜರಾಗುವಂತೆ ವಿಧಾನಸೌಧದ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ. ಎಂದಿಗಿಂತ ಎರಡು ಗಂಟೆ ತಡವಾಗಿ ಕಚೇರಿ ಕೆಲಸಗಳು ಆರಂಭವಾಗಲಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Video Top Stories