Asianet Suvarna News Asianet Suvarna News

ವಾಲ್ಮೀಕಿ ನಿಗಮ ಹಗರಣವನ್ನ SIT ತನಿಖೆಗೆ ಆದೇಶಿಸಿದ ಸಿಎಂ; ಸಿಬಿಐ ಎಂಟ್ರಿಯಾದರೆ ಸರ್ಕಾರಕ್ಕೆ ಸಂಕಷ್ಟ..!

ರಾಜ್ಯ ಸರ್ಕಾರ ಹಾಗೂ ಸಚಿವ  ನಾಗೇಂದ್ರ ಅವರ ಸ್ಥಾನಕ್ಕೆ ಕಂಟಕವಾಗಬಲ್ಲ ವಾಲ್ಮೀಕಿ ನಿಗಮದ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರ ಎಸ್‌ಐಟಿಗೆ ವಹಿಸಿದೆ. ಇನ್ನೊಂದೆಡೆ, ಯೂನಿಯನ್‌ ಬ್ಯಾಂಕ್‌ ಪ್ರಕರಣದ ತನಿಖೆ ಮಾಡುವಂತೆ ಸಿಬಿಐಗೆ ಪತ್ರ ಬರೆದಿದೆ.

ಬೆಂಗಳೂರು (ಮೇ.31): ಸಚಿವ ನಾಗೇಂದ್ರ ಬಚಾವ್​ ಮಾಡಲು ಸಿಎಂ ಮುಂದಾಗಿದ್ದಾರಾ ಎನ್ನುವ ಅನುಮಾನ ವ್ಯಕ್ತವಾಗಿದೆ. 187 ಕೋಟಿ ಅವ್ಯವಹಾರದ ತನಿಖೆಗೆ ಎಸ್​ಐಟಿ ರಚಿಸಿ ಆದೇಶ ಹೊರಡಿಸಿದ್ದಾರೆ. ಅತ್ತ ಯೂನಿಯನ್ ಬ್ಯಾಂಕ್ ಇದರ ತನಿಖೆ ಮಾಡಿ ಎಂದು ಸಿಬಿಐಗೆ ಪತ್ರ ಬರೆದಿದೆ.

ಸಿಬಿಐ ಎಂಟ್ರಿಗೂ ಮುನ್ನವೇ ಸಚಿವ ನಾಗೇಂದ್ರ ತಲೆದಂಡವಾಗುತ್ತಾ ಎನ್ನುವ ಅನುಮಾನವಿದೆ. ಸಿಬಿಐಗೆ ಈಗಾಗಲೇ ಯೂನಿಯನ್‌ ಬ್ಯಾಂಕ್‌ ದೂರು ನೀಡಿದೆ. ಬ್ಯಾಂಕ್‌ನಲ್ಲಿ 10 ಕೋಟಿಗೂ ಹೆಚ್ಚು ಅವ್ಯವಹಾರವಾದ್ರೆ ಸಿಬಿಐ ಎಂಟ್ರಿ ಆಗುತ್ತದೆ ಅನ್ನೋದು ನಿಯಮ. ಒಂದು ವೇಳೆ ಸಿಬಿಐ ಎಂಟ್ರಿಯಾದ್ರೆ ರಾಜ್ಯ ಸರ್ಕಾರಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ.

 

Breaking: ವಾಲ್ಮೀಕಿ ನಿಗಮ ಅಕ್ರಮ ಹಣ ವರ್ಗಾವಣೆ, ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

ಇನ್ನು ನಿಗಮ ಮಂಡಳಿ ಅವ್ಯವಹಾರ ಬಗ್ಗೆ ಎಸ್‌ಐಟಿ ರಚಿಸುವ ಮುನ್ನ ಸಿದ್ದರಾಮಯ್ಯ ಸರಣಿ ಸಭೆ ನಡೆಸಿದ್ದಾರೆ. ದಿನವೀಡಿ ಸಚಿವರಾದ ಡಾ. ಪರಮೇಶ್ವರ್, ಮಹದೇವಪ್ಪ,ಕೆ ಎನ್​ ರಾಜಣ್ಣ, ದಿನೇಶ್​ ಗುಂಡೂರಾವ್​ ಜತೆ ಸಿದ್ದರಾಮಯ್ಯ ಸುದೀರ್ಘ ಚರ್ಚೆ ನಡೆಸಿದ್ದಾರೆ.

Video Top Stories