Asianet Suvarna News Asianet Suvarna News

ಮೈಸೂರಲ್ಲಿ ದಸರಾ ವೈಭವ: ಕಾವಾಡಿಗರಿಗೆ ಉಪಹಾರ ವಿತರಿಸಿದ ಕೇಂದ್ರ ಸಚಿವೆ ಕರಂದ್ಲಾಜೆ

Oct 14, 2021, 12:11 PM IST

ಮೈಸೂರು(ಅ.14): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ವೈಭವ ಕಳೆಗಟ್ಟಿದೆ. ಅರಮನೆಯಲ್ಲಿ ಆಯುಧ ಪೂಜೆಯ ಸಂಭ್ರಮ ಮನೆಮಾಡಿದೆ. ಬೆಳಿಗ್ಗೆಯಿಂದಲೇ ಆರಂಭವಾಗಿದೆ ಪೂಜಾ ವಿಧಿವಿಧಾನ. ಆಯುಧಗಳು ಕೋಡಿಸೋಮೇಶ್ವರ ದೇವಸ್ಥಾನಕ್ಕೆ ರವಾನೆಯಾಗಿದ್ದು, ಅಲ್ಲಿ ಆಯುಧಗಳನ್ನ ಶುಚಿಗೊಳಿಸಿ ರಾಜಮನೆತನ ಪೂಜೆ ಸಲ್ಲಿಸಲಿದೆ. ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪ್ರತಿವರ್ಷದಂತೆ ಈ ವರ್ಷ ಕೂಡ ತಾಯಿ ಚಾಮುಂಡೇಶ್ಬರಿ ದೇವಿಯ ದರ್ಶನವನ್ನ ಪಡೆದಿದ್ದೇನೆ. ಮಾವುತರು ಮತ್ತು ಕಾವಾಡಿಗರಿಗೆ ಬೆಳಗಿನ ಉಪಹಾರವನ್ನು ನಾವು ಮುಂದುವರೆಸಿಕೊಂಡು ಹೋತ್ತಿದ್ದೇವೆ ಅಂತ ಹೇಳಿದ್ದಾರೆ. 

ಮೈಸೂರು ಅರಮನೆಯಲ್ಲಿ ಕಳೆಗಟ್ಟಿದೆ ಆಯುಧ ಪೂಜಾ ಸಂಭ್ರಮ