Asianet Suvarna News Asianet Suvarna News

ಪೊಗರು ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಗರಂ

ಪೊಗರು ಚಿತ್ರದಲ್ಲಿ ಬ್ರಾಹ್ಮಣರ ಬಗ್ಗೆ ವಿವಾದಾತ್ಮಕ ದೃಶ್ಯದ ಕುರಿತು ಟ್ವೀಟ್​ ಮಾಡಿ ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ. 

Feb 23, 2021, 7:34 PM IST

ಬೆಂಗಳೂರು, (ಫೆ.23): ಪೊಗರು ಚಿತ್ರದಲ್ಲಿ ಬ್ರಾಹ್ಮಣರ ಬಗ್ಗೆ ವಿವಾದಾತ್ಮಕ ದೃಶ್ಯದ ಕುರಿತು ಟ್ವೀಟ್​ ಮಾಡಿ ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಪೊಗರು ದೃಶ್ಯ, ಸೆನ್ಸಾರ್‌ ಮಂಡಳಿಗೆ ಮಂತ್ರಾಲಯ ಸ್ವಾಮೀಜಿ ಸಲಹೆ

ಹಿಂದೂಗಳನ್ನ ಅವಮಾನಿಸುವುದು ಫ್ಯಾಷನ್​ ಆಗಿಬಿಟ್ಟಿದೆ. ನಮ್ಮ ಭಾವನೆಗಳ ಮೇಲೆ ಸವಾರಿ ಮಾಡಲಾಗುತ್ತಿದೆ. ಈ ರೀತಿ ಬೇರೆ ಧರ್ಮಗಳನ್ನ ಚಿತ್ರಿಸಲು ಧೈರ್ಯವಿದೆಯಾ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ವಿವಾದಾತ್ಮಕ ದೃಶ್ಯ ಸೆನ್ಸಾರ್​ ಮಾಡುವವರೆಗೂ ನಿಲ್ಲಿಸಬೇಕು. ಪೊಗರು ಚಿತ್ರದ ಸ್ಕ್ರೀನಿಂಗ್ ನಿಲ್ಲಿಸಬೇಕಾಗಿದೆ ಎಂದು ಟ್ವೀಟ್​ ಮಾಡಿ ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Video Top Stories