ತುಮಕೂರು: BIG 3 ವರದಿ ಬಳಿಕ ಹೈಟೆಕ್ ಫುಡ್ ಸ್ಟಾಲ್‌ಗಳು ಉದ್ಘಾಟನೆ!
ತುಮಕೂರಿನ ಕೋತಿತೋಪು ರಸ್ತೆಯಲ್ಲಿ ಸ್ಮಾರ್ಟಿ ಸಿಟಿಯವರು 52 ಲಕ್ಷ ಖರ್ಚು ಮಾಡಿ ಫುಡ್ ಸ್ಟ್ರೀಟ್ ನಿರ್ಮಾಣ ಮಾಡಿದ್ದರು. ಕಾಮಗಾರಿ ಮುಗಿದು ಪಾಲಿಕೆಯವರಿಗೆ ಹ್ಯಾಂಡ್ ಓವರ್ ಮಾಡಲಾಗಿತ್ತು. ಆದರೆ ಫಲಾನುಭವಿಗಳಿಗೆ ಹಂಚಿಕೆ ಮಾಡಿರಲಿಲ್ಲ.
ತುಮಕೂರು (ಜೂ. 27): ಇಲ್ಲಿನ ಕೋತಿತೋಪು ರಸ್ತೆಯಲ್ಲಿ ಸ್ಮಾರ್ಟಿ ಸಿಟಿಯವರು 52 ಲಕ್ಷ ಖರ್ಚು ಮಾಡಿ ಫುಡ್ ಸ್ಟ್ರೀಟ್ ನಿರ್ಮಾಣ ಮಾಡಿದ್ದರು. ಕಾಮಗಾರಿ ಮುಗಿದು ಪಾಲಿಕೆಯವರಿಗೆ ಹ್ಯಾಂಡ್ ಓವರ್ ಮಾಡಲಾಗಿತ್ತು. ಆದರೆ ಫಲಾನುಭವಿಗಳಿಗೆ ಹಂಚಿಕೆ ಮಾಡಿರಲಿಲ್ಲ. ಹಳೆಯ ಜಾಗದಲ್ಲೇ ವ್ಯಾಪಾರಿಗಳು ವ್ಯಾಪಾರ ಮಾಡಿಕೊಂಡಿದ್ದರು. ಮಳಿಗೆ ರೆಡಿ ಇದ್ದರೂ, ಹಂಚಿಕೆ ಮಾಡಲು ನಿಮಗೆ ಬಂದಿದ್ದೇನು..? ಎಂದು ಬಿಗ್ 3 ಕ್ಲಾಸ್ ತೆಗೆದುಕೊಂಡಿತ್ತು. ಬಿಗ್ 3 ವರದಿ ಬೆನ್ನಲ್ಲೇ ಪಾಲಿಕೆ ತುರ್ತು ಸಭೆ ನಡೆಸಿ, ಫಲಾನುಭವಿಗಳ ಪಟ್ಟಿ ತಯಾರು ಮಾಡಿದರು. ಇದೀಗ ವ್ಯಾಪಾರಿಗಳಿಗೆ ಹಂಚಿಕೆ ಮಾಡಲಾಗಿದೆ.
BIG 3: ತುಮಕೂರಿನಲ್ಲಿ 26 ಮಳಿಗೆಗಳ ಜಾಗ ಅದ್ವಾನ, ವರ್ಷವಾದರೂ ಫಲಾನುಭವಿಗಳಿಗೆ ಸಿಕ್ಕಿಲ್ಲ