Asianet Suvarna News Asianet Suvarna News

ಆ.15ರ ಬಳಿಕ ಬೆಂಗಳೂರಲ್ಲಿ ಟಫ್ ರೂಲ್ಸ್, ಸೋಂಕು ಹೆಚ್ಚಾದರೆ ಮತ್ತೆ ಲಾಕ್ಡೌನ್‌..!

- ಆ.15 ರ ನಂತರ ನಗರದಲ್ಲಿ ಕಠಿಣ ನಿಯಮ: ಕಂದಾಯ ಸಚಿವ ಅಶೋಕ್‌ ಎಚ್ಚರಿಕೆ

- ಸೋಂಕು ಹೆಚ್ಚಾದರೆ ಬೆಂಗಳೂರು ಮತ್ತೆ ಲಾಕ್ಡೌನ್‌

-3  ಮತ್ತು 3 ಕ್ಕಿಂತ ಹೆಚ್ಚು ಪ್ರಕರಣ ಕಂಡು ಬಂದರೆ ಮೈಕ್ರೋ ಕಂಟೈನ್ಮೆಂಟ್‌ ಝೋನ್ 

ಬೆಂಗಳೂರು (ಆ. 10): ಆ.15ರ ನಂತರ ಬೆಂಗಳೂರಿನಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುತ್ತದೆ. ನಿಯಮ ಉಲ್ಲಂಘಿಸಿ ಸೋಂಕು ಹೆಚ್ಚಾದರೆ ಅನಿವಾರ್ಯವಾಗಿ ನಗರದಲ್ಲಿ ಮತ್ತೆ ಲಾಕ್‌ಡೌನ್‌ ಹೇರಬೇಕಾಗುತ್ತದೆ ಎಂದು ಬೆಂಗಳೂರು ಉಸ್ತುವಾರಿ ಸಚಿವ ಆರ್‌.ಅಶೋಕ್‌ ಎಚ್ಚರಿಕೆ ನೀಡಿದ್ದಾರೆ.

ಆ. 15 ರ ಬಳಿಕ ಕರ್ನಾಟಕದಲ್ಲಿ ಮತ್ತೆ ಲಾಕ್‌ಡೌನ್ ಸುಳಿವು ನೀಡಿದ ಸಚಿವ ಅಶೋಕ್! 

ಆಗಸ್ಟ್ 20 ರ ನಂತರ ಸಾಲು ಸಾಲು ಹಬ್ಬಗಳು ಬರಲಿವೆ. ಹಬ್ಬ, ಜಾತ್ರೆಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಜನ ದಟ್ಟಣೆಯಿಂದ ಕೊರೋನಾ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ಟಫ್ ರೂಲ್ಸ್‌ಗೆ ಮುಂದಾಗಿದೆ.