Yadagir: ಜಾನುವಾರು ಸಂತೆಯಲ್ಲಿ ಜನ ಜಾತ್ರೆ, ಜಿಲ್ಲಾಡಳಿತದ ಆದೇಶಕ್ಕೆ ಡೋಂಟ್ ಕೇರ್
ಯಾದಗಿರಿ (Yadagir) ಜಾನುವಾರು ಜಾತ್ರೆಯಲ್ಲಿ ಸಾವಿರಾರು ಮಂದಿ ಸೇರಿದ್ದಾರೆ. ಜಿಲ್ಲಾಡಳಿತದ ಆದೇಶಕ್ಕೂ ಯಾರೂ ಕೇರ್ ಮಾಡಿಲ್ಲ. ಮಾಸ್ಕ್ ಇಲ್ಲದೇ, ಅಂತರವಿಲ್ಲದೇ ಸಾವಿರಾರು ಮಂದಿ ಸಂತೆಯಲ್ಲಿ ಭಾಗಿಯಾಗಿದ್ದಾರೆ.
ಯಾದಗಿರಿ (ಜ. 18): ಇಲ್ಲಿನ ಜಾನುವಾರು ಜಾತ್ರೆಯಲ್ಲಿ ಸಾವಿರಾರು ಮಂದಿ ಸೇರಿದ್ದಾರೆ. ಜಿಲ್ಲಾಡಳಿತದ ಆದೇಶಕ್ಕೂ ಯಾರೂ ಕೇರ್ ಮಾಡಿಲ್ಲ. ಮಾಸ್ಕ್ ಇಲ್ಲದೇ, ಅಂತರವಿಲ್ಲದೇ ಸಾವಿರಾರು ಮಂದಿ ಸಂತೆಯಲ್ಲಿ ಭಾಗಿಯಾಗಿದ್ದಾರೆ.
ಇನ್ನು ವಿಜಯಪುರದ (Vijayapura) ಬಳಗಾನೂರು ಗ್ರಾಮದಲ್ಲಿ ನೀಲಗಂಗಾಂಬಿಕಾ ದೇವಿಯ ಅದ್ಧೂರಿ ರಥೋತ್ಸವ ನಡೆದಿದೆ. ಸರ್ಕಾರ ನಿರ್ಬಂಧ ಹೇರಿ ಸರಳ ಜಾತ್ರೆ ನಡೆಸಲು ನಿರ್ದೇಶನ ನೀಡಿದ್ದರೂ ಅನೇಕ ಕಡೆ ಹಲವೆಡೆ ಜನ ಸಾಗರೋಪಾದಿಯಾಗಿ ಹರಿದು ಬಂದಿರುವ ಘಟನೆಗಳು ವರದಿಯಾಗಿವೆ.
ಬನದ ಹುಣ್ಣಿಮೆ ನಿಮಿತ್ತ ಬಾದಾಮಿಯ ಬನಶಂಕರಿ, ಕೊಪ್ಪಳದ ಹುಲಿಗಿ, ಹೂವಿನ ಹಡಗಲಿಯ ಮೈಲಾರ ಕ್ಷೇತ್ರ, ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ, ನಂಜನಗೂಡು ದೇವಸ್ಥಾನಗಳಲ್ಲಂತೂ ವ್ಯಾಪಕ ಭದ್ರತೆ ಏರ್ಪಡಿಸಿದ್ದರೂ ಜನಜಂಗುಳಿಯಾಗಿದ್ದು ಪೊಲೀಸರೂ ನಿಸ್ಸಾಹಯಕರಾಗಿ ನೋಡಬೇಕಾದ ಪರಿಸ್ಥಿತಿ ಬಂದೊದಗಿತ್ತು. ಬಾದಾಮಿ ಬನಶಂಕರಿ ಜಾತ್ರೆಯೆಲ್ಲಂತೂ ಒಂದು ಹಂತದಲ್ಲಿ ಪೊಲೀಸರು ಲಾಠಿಚಾರ್ಜ್ ಮಾಡಿದ ಪ್ರಸಂಗವೂ ನಡೆಯಿತು.