Asianet Suvarna News Asianet Suvarna News

Tariff Hike: ಬೆಲೆ ಏರಿಕೆ ಭೀತಿಯಲ್ಲಿದ್ದ ಜನರಿಗೆ ರಿಲೀಫ್, ಸಿಎಂರಿಂದ ಗುಡ್‌ನ್ಯೂಸ್

ಹಾಲು, ನೀರು, ವಿದ್ಯುತ್ ದರ ಏರಿಕೆಯ (Price Hike) ತಲೆಬಿಸಿಯಲ್ಲಿದ್ದ ಜನರಿಗೆ ರಿಲೀಫ್ ಸಿಕ್ಕಿದೆ. ದರ ಏರಿಕೆ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ, ಎಲ್ಲಾ ಆಯಾಮಗಳಿಂದ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅವಸರದ ತೀರ್ಮಾನ ಇಲ್ಲ ಎಂದು ಸಿಎಂ ಬೊಮ್ಮಾಯಿ (CM Bommai) ಹೇಳಿದರು. 

ಬೆಂಗಳೂರು (ಜ. 22): ಹಾಲು, ನೀರು, ವಿದ್ಯುತ್ ದರ ಏರಿಕೆಯ (Price Hike) ತಲೆಬಿಸಿಯಲ್ಲಿದ್ದ ಜನರಿಗೆ ರಿಲೀಫ್ ಸಿಕ್ಕಿದೆ. ದರ ಏರಿಕೆ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ, ಎಲ್ಲಾ ಆಯಾಮಗಳಿಂದ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅವಸರದ ತೀರ್ಮಾನ ಇಲ್ಲ ಎಂದು ಸಿಎಂ ಬೊಮ್ಮಾಯಿ (CM Bommai) ಹೇಳಿದರು. 

ನೀರಿನ ದರ (Water Price) ಪರಿಷ್ಕರಿಸುವಂತೆ ಎರಡು ವರ್ಷದ ಹಿಂದೆ ಸಲ್ಲಿಸಿದ್ದ ಪ್ರಸ್ತಾವನೆ ಪರಿಶೀಲಿಸಿ ಒಪ್ಪಿಗೆ ನೀಡುವಂತೆ ಬೆಂಗಳೂರು ಜಲಮಂಡಳಿ ರಾಜ್ಯ ಸರ್ಕಾರಕ್ಕೆ ಪುನಃ ಪತ್ರ ಬರೆದಿದ್ದು, ಸರ್ಕಾರ ಸಮ್ಮತಿ ನೀಡಿದರೆ ಜನರಿಗೆ ನೀರು ಇನ್ನಷ್ಟು ದುಬಾರಿಯಾಗಲಿದೆ ಎನ್ನಲಾಗಿದೆ. 

ವಿದ್ಯುತ್‌ ದರ ಏರಿಕೆ ಮಾಡುವ ಕುರಿತು ಎಸ್ಕಾಂಗಳು ಕೆಇಆರ್‌ಸಿಗೆ ಬೇಡಿಕೆ ಸಲ್ಲಿಸಿರುವ ಬೆನ್ನಲ್ಲೇ ಇಂಧನ ಸಚಿವ ಸುನಿಲ್‌ ಕುಮಾರ್‌ ಕೂಡ ಸದ್ಯದ ಪರಿಸ್ಥಿತಿಯಲ್ಲಿ ವಿದ್ಯುತ್‌ ದರ ಏರಿಕೆ ಅನಿವಾರ್ಯ ಎಂದು ಹೇಳಿದ್ದಾರೆ. ಇವೆಲ್ಲದರ ಬಗ್ಗೆ ಸಿಎಂ ಬೊಮ್ಮಾಯಿಯವರನ್ನು ಪ್ರಶ್ನಿಸಿದಾಗ, ದರ ಏರಿಕೆ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಎಂದಿದ್ದಾರೆ. 
 

Video Top Stories