Asianet Suvarna News Asianet Suvarna News

ಊರಿಗೆ ಹೋಗಲು ಹಣವಿಲ್ಲದೇ ಮೆಜೆಸ್ಟಿಕ್‌ನಲ್ಲಿ ದಂಪತಿ ಪರದಾಟ!

ಯಾದಗಿರಿಯ ಸಿದ್ದಪ್ಪ-ಭೀಮಪ್ಪ ದಂಪತಿ ಮೆಜೆಸ್ಟಿಕ್‌ನಲ್ಲಿ ಪರದಾಡಿದ್ದಾರೆ. ಈ ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದಂತೆ ಸಾರಿಗೆ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ದಂಪತಿ ಹಾಗೂ ಇಬ್ಬರು ಮಕ್ಕಳಿಗೆ ಯಾದಗಿರಿಗೆ ತೆರಳಲು ಅವಕಾಶ ಮಾಡಿಕೊಟ್ಟಿದೆ.

First Published May 20, 2020, 2:50 PM IST | Last Updated May 20, 2020, 2:50 PM IST

ಬೆಂಗಳೂರು(ಮೇ.20): ನಗರದ ಗಾಂಧಿ ಬಜಾರ್‌ ಬಳಿ ಗಾರೆ ಕೆಲಸ ಮಾಡುತ್ತಿದ್ದ ದಂಪತಿ ತಮ್ಮ ಊರಿಗೆ ಹೋಗಲು ಮೆಜೆಸ್ಟಿಕ್‌ಗೆ ಮಕ್ಕಳ ಸಮೇತ ಬಂದಿದ್ದಾರೆ. ಆದರೆ ಅವರಿಗೆ ಊರಿಗೆ ಹೋಗಲು ಟಿಕೆಟ್ ಮಾಡಿಸಬೇಕಾದಷ್ಟು ಹಣವಿಲ್ಲದೇ ಪರದಾಡಿದ ಘಟನೆ ನಡೆದಿದೆ.

ಯಾದಗಿರಿಯ ಸಿದ್ದಪ್ಪ-ಭೀಮಪ್ಪ ದಂಪತಿ ಮೆಜೆಸ್ಟಿಕ್‌ನಲ್ಲಿ ಪರದಾಡಿದ್ದಾರೆ. ಈ ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದಂತೆ ಸಾರಿಗೆ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ದಂಪತಿ ಹಾಗೂ ಇಬ್ಬರು ಮಕ್ಕಳಿಗೆ ಯಾದಗಿರಿಗೆ ತೆರಳಲು ಅವಕಾಶ ಮಾಡಿಕೊಟ್ಟಿದೆ.

ಬಸ್ ಸಂಚಾರ ಆರಂಭ: ಶಿವಮೊಗ್ಗದ ಗ್ರೌಂಡ್ ರಿಪೋರ್ಟ್

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರಾದ ಪ್ರಭಾಕರ ರೆಡ್ಡಿ ಸೂಕ್ತ ವ್ಯವಸ್ಥೆ ಮಾಡಿದ್ದಾರೆ. ಈ ದಂಪತಿ ಖುಷಿಯಿಂದ ಬಸ್ ಹತ್ತಿ  ಊರಿನ ಕಡೆ ಹೊರಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 
Video Top Stories